ಹೆಣ್ಣು ಮಗಳ ಸುರಕ್ಷತೆಗೆ ಯಾಕಿಷ್ಟು ಹಿಂದೇಟ್ಟು?: ಮಹಿಳಾ ಆಯೋಗದಿಂದ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ , ರಾಜ್ಯ ಮಹಿಳಾ ಆಯೋಗ ಜಿಲ್ಲಾಧಿಕಾರಿಗೆ ನೊಟೀಸ್ ನೀಡಿದ್ದಾರೆ. 2 ಡೆಡ್ ಲೈನ್ ಮುಗಿದರೂ ಪಾಶ್ ಕಮಿಟಿ ರಚನೆಯಾಗದ ಹಿನ್ನೆಲೆಯಲ್ಲಿ, ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಜಿಲ್ಲಾಧಿಕಾರಿಗೆ ಸೂಚನೆ ನೀಡಿಲಾಗಿದೆ.

ಪತ್ರಿಕಾಗೋಷ್ಠಿ ನಡೆಸಿ ವಿಚಾರಗಳನ್ನು ಹಂಚಿಕೊಂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ಕೊಟ್ಟು ಸಭೆ ನಡೆಸಿದ್ದೆ ಅಲ್ಲ ಪಾಶ್ ಕಮಿಟಿ ಮಾಡೋದಕ್ಕೆ ತಿಳಿಸಲಾಗಿತ್ತು. ಅದಕ್ಕೆ ಅವರು ಸಮಯ ಅವಕಾಶ ಕೇಳಿದ್ರು. ಸಾಕಷ್ಟು ಬಾರಿ‌ ಸಮಯ ಮೀರಿದ್ದಾರೆ . ಇದೀಗ ಮತ್ತೆ ಸಮಯಾವಕಾಶ ಕೇಳಿದ್ದಾರೆ. ವಿದೇಶದಲ್ಲಿ ಒಂದು ಕಾರ್ಯಕ್ರಮ ಇದ್ದು, ನಾವೆಲ್ಲ ಅಲ್ಲಿ ಬ್ಯೂಸಿ ಆಗುತ್ತೆವೆ. ಅದಕ್ಕೆ ಕಾಲಾವಕಾಶ ಕೇಳಿದ್ದಾರೆ.

ಈಗಾಗಲೇ ಎರಡು ತಿಂಗಳಿಗೂ ಅಧಿಕ ಸಮಯ ನೀಡಿದ್ದೇವೆ. ಒಂದು ಹೆಣ್ಣಿನ ರಕ್ಷಣೆಗಾಗಿ ಮಾಡುತ್ತಿರೋ ಕಮಿಟಿ. ಆದ್ರೆ ಈ ಕಮಿಟಿ ಮಾಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ. ಯಾಕೆ ಮಾಡ್ತೀಲ್ಲ ಅನ್ನೋದೆ ಗೊತ್ತಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ನಾವು ಮಹಿಳಾ ಆಯೋಗದಿಂದ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಪಾಶ್ 2013 ಕಾಯ್ದೆ ಪ್ರಕಾರ ಕ್ರಮ ಜರುಗಿಸುವಂತೆ ಪತ್ರ ಬರೆದಿದ್ದೇವೆ. ಕರ್ನಾಟಕ ಚಲನ ಚಿತ್ರ ಮಂಡಳಿ ಕಮಿಟಿ ರಚಿಸದೆ ಇದ್ರೆ ಮೊದಲೆನೆಯದಾಗಿ ಫಿಲ್ಮ್ ಚೇಂಬರ್ ಗೆ 50 ಸಾವಿರ ದಂಡ ಬೀಳುತ್ತೆ. ಜೊತೆಗೆ ಕರ್ನಾಟಕ ವಾಣಿಜ್ಯ ಮಂಡಳಿಯ ಸಂಘದ ರಿಜಿಸ್ಟ್ರೇಷನ್ ಸಹ ರದ್ದಾಗುತ್ತೆ.

ಹೇಮಾ ವರದಿ ಪ್ರಕಾರ ನಮ್ಗು‌ ಒಂದು ಕಮಿಟಿ ಬೇಕು‌ ಎಂದು ಮಹಿಳಾ ಕಲಾವಿದರು ನಮಗೆ ಮನವಿ ಮಾಡಿದ್ರು. ಹೇಮಾ ವರದಿಯಲ್ಲಿ ನಿವೃತ್ತ ಜಡ್ಜ್ ಅನ್ನು ಕಮಿಟಿಯ ಅಧ್ಯಕ್ಷರನಾಗಿ‌ ನೇಮಕ ಮಾಡಿದ್ದಾರೆ. ಪ್ರತಿ ಸಂಸ್ಥೆಗಳಲ್ಲಿ POSH ಕಮಿಟಿ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಆದೇಶ ಇದೆ. ಕಾನೂನು ಮುಂದೆ ಎಲ್ಲರು ಒಂದೇ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ನಾವು ಪತ್ರ ಬರೆದ್ರೂ ಫಿಲ್ಮ ಚೇಂಬರ್ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಒಂದುವೇಳೆ POSH ಜಾರಿ ಮಾಡದಿದ್ರೆ, ಅವರ ಮೇಲೆ ಫೈನ್ ಹಾಕಬೋದು . ಕಾನೂನು ಕ್ರಮವನ್ನು ಮತ್ತು ಲೈಸೆನ್ಸ್ ಕ್ಯಾನ್ಸಲ್ ರದ್ದು ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇರುತ್ತೆ. ಸರ್ಕಾರದಿಂದ ಕಮಿಟಿ ಮಾಡಲು ನಮಗೆ ಅಪ್ರೂವಲ್ ಬಂದಿದೆ. ಮುಂದೆ ನಾವು ಈ ಕಮಿಟಿ ಮಾಡ್ತೀವಿ.ಯಾಕೇ ಹಿಂದೇಟ್ಟು ಹಾಕುತ್ತಿದ್ದಾರೆ ಅಂತಾ ನಮಗೆ ಗೊತ್ತಾಗುತ್ತಿಲ್ಲ. ಯಾಕೇ ಈರೀತಿ ನಿರ್ಲಕ್ಷ ಮಾಡ್ತಿದ್ದಾರೆ ಗೊತ್ತಿಲ್ಲ .ಈ ಮಣ್ಣಿನ ಕಾನೂನಿನ ಮುಂದೆ ಯಾರು ತಪ್ಪಿಸಿಕೊಳ್ಳಲ್ಲೂ ಸಾಧ್ಯವಿಲ್ಲ ಎಂದರು.

ಹೆಣ್ಣು ಮಗಳ ಸುರಕ್ಷತೆಗೆ ಒಂದು ಕಮಿಟಿ ಮಾಡಲು ಯಾಕಿಷ್ಟು ಹಿಂದೇಟ್ಟು ಹಾಕುತ್ತಿದ್ದಾರೆ ಯಾಕೆ ಇಷ್ಟು ತಾತ್ಸಾರ! ವಾಣಿಜ್ಯ ಮಂಡಳಿ ಅಂದರೆ ಇವರೇನು ಹೆಚ್ಚಿನವರು ಅಲ್ಲಾ? ಎಲ್ಲರೂ ನಮಗೆ ಒಂದೇ ಎಲ್ಲರೂ ಸರಿ ಸಮಾನರು ನಮಗೆ . ನಾವು ಎಲ್ಲಾ ಜಿಲ್ಲೆಯಲ್ಲಿ ಪಾಶ ಕಮಿಟಿ ಬಗ್ಗೆ ಮಾಡಬೇಕು ಅಂತಾ ಸಭೆ ಮಾಡ್ತಿದ್ದೇವೆಈಗಾಗ್ಲೇ ಹಲವು ಜಿಲ್ಲೆಗಳಲ್ಲಿ ನಾವು ಸಭೆ ಮಾಡಿದ್ದೇವೆ . ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಪಾಶ್ ಕಮಿಟಿ ಇಲ್ಲಾ ಹಂತ ಪರಿಸ್ಥಿತಿ ಎದುರಾಗಿದೆ ನಮಗೆ ಈ ಬಗ್ಗೆ ರಾಷ್ಟೀಯ ಮಹಿಳಾ ಆಯೋಗದ ಆದೇಶ ಇದೆ. ಹತ್ತಕ್ಕಿಂತ ಹೆಚ್ಚು ಮಹಿಳಾ ಕೆಲಸಗಾರರು ಇದ್ರೆ ಅಲ್ಲಿ ಪಾಶ್ ಕಮಿಟಿ ಮಾಡಲೇಬೇಕು ಎಂದಿದ್ದಾರೆ.

ಸ್ಯಾಂಡಲ್‌ವುಡ್‌‌ POSH ಕಮಿಟಿ ಬೇಡವೆಂದು ವಿರೋಧ ವ್ಯಕ್ತವಾಗಿತ್ತು. POSH ಕಮಿಟಿ ಮಾಡಲೇ ಬೇಕು, ಮಾಡಂಗಿಲ್ಲ ವೆಂದು ಹೇಳಂಗಿಲ್ಲ. ಯಾಕೆ ಮಾಡಲ್ಲವೆಂದು ಉತ್ತರಿಸುವಂತೆ ಖಡಕ್ ಸೂಚನೆ ಕೊಟ್ಟಿತ್ತು ಆಯೋಗ. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯಿಂದ ಖಡಕ್ ಸೂಚನೆ ನೀಡಲಾಗಿತ್ತು.ಆದರೆ ಇದುವರೆಗೂ ಕಮಿಟಿ ರಚನೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ದೂರು ನೀಡಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!