Sunday, April 18, 2021

Latest Posts

ಟಾಲಿವುಡ್ ನ ಡಿಮ್ಯಾಂಡ್ ನಲ್ಲಿರುವ ನಟ ನಾಣಿಯ ಸಂಭಾವನೆ ಎಷ್ಟು ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಷ್ಟಾ ಚಮ್ಮಾ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ  ಟಾಲಿವುಡ್ ನಟ ನಾಣಿ ನ್ಯಾಚುರಲ್ ಆಕ್ಟಿಂಗ್ ನಿಂದಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ದಿನೇ ದಿನೇ ನಾನಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಸಂಭಾವನೆ ಕೂಡ ಹೈಕ್ ಮಾಡಿಕೊಂಡಿದ್ದಾರಂತೆ.

ಹೌದು… ಮಿಡಲ್ ಕ್ಲಾಸ್ ಅಬ್ಬಾಯಿ’ ಖ್ಯಾತಿಯ ನಾಣಿ ಚಿತ್ರವೊಂದಕ್ಕೆ 10 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ನಾಣಿ  14 ಕೋಟಿಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ!

ಸದ್ಯಕ್ಕೆ ನಾಣಿ ಶಿವ ನಿರ್ವಾಣ ನಿರ್ದೇಶನದ ‘ಟಕ್ ಜಗದೀಶ್’ ಚಿತ್ರದಲ್ಲಿ  ನಟಿಸುತ್ತಿದ್ದು, ಇದರ ಜೊತೆಗೆ ‘ಶ್ಯಾಮ್ ಸಿಂಗಾ ರಾಯ್’ ಚಿತ್ರಕ್ಕೂ  ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಗಳಿಗೆ ನಾಣಿ 14 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss