ಭಾರತದ ಯೂಟ್ಯೂಬ್‌ ಕ್ರಿಯೇಟರ್ಸ್‌ ಜಿಡಿಪಿಗೆ ಕೊಡುತ್ತಿರೋ ಕೊಡುಗೆಯಷ್ಟಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಯೂಟ್ಯೂಬಿನಲ್ಲಿ ಕಂಟೆಂಟ್‌ ರಚಿಸುವುದು ಇತ್ತೀಚಿನ ವರ್ಷಗಳಲ್ಲಿ ಹೊಸ ಉದ್ಯೋಗವಾಗಿ ಮಾರ್ಪಟ್ಟಿದೆ. ಕೋಟಿಗಟ್ಟಲೇ ಸಂಪಾದನೆ ಮಾಡುವ ಸಾವಿರಾರು ಯೂಟ್ಯೂಬರ್‌ ಗಳಿದ್ದಾರೆ. ಭಾರತದಲ್ಲೂ ಯೂಟ್ಯೂಬ್‌ ಕ್ರಿಯೇಟರ್‌ ಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ದೇಶದ ಜಿಡಿಪಿಯಲ್ಲೂ ಯೂಟ್ಯೂಬರ್‌ ಗಳು ಸಾವಿರಾರು ಕೋಟಿ ರುಪಾಯಿಗಳ ಕೊಡುಗೆನೀಡುತ್ತಿದ್ದಾರೆ.

ವರದಿಯೊಂದರ ಪ್ರಕಾರ ಭಾರತದ ಸ್ಥಳೀಯ ಕಂಟೆಂಟ್‌ ಕ್ರಿಯೇಟರ್ಸ್‌ ವಾರ್ಷಿಕವಾಗಿ ದೇಶದ GDP ಗೆ ಅಂದಾಜು 6,800 ಕೋಟಿ ರೂಪಾಯಿ ಕೊಡುಗೆ ನೀಡುತ್ತಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಅಂದಾಜು 7 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದಾರೆ.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಆಯೋಜಿಸಿದ್ದ ತಂತ್ರಜ್ಞಾನ, ನಾವೀನ್ಯತೆ ಮತ್ತು ಸಮಾಜದ ಕುರಿತಾದ ಸಮ್ಮೇಳನದಲ್ಲಿ ಮಾತನಾಡುವ ವೇಳೆ YouTube ಸೇರಿದಂತೆ Google ನ ಮುಖ್ಯ ಉತ್ಪನ್ನ ಅಧಿಕಾರಿ (CPO) ನೀಲ್ ಮೋಹನ್ “ಭಾರತದಲ್ಲಿ ಕ್ರಿಯೇಟರ್‌ ಆರ್ಥಿಕತೆಯು ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಿದೆ, ಸುಮಾರು ₹6800 ಕೋಟಿಗಳನ್ನು ಗಳಿಸುತ್ತಿದೆ ಮತ್ತು 7 ಲಕ್ಷವನ್ನು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ” ಎಂದಿದ್ದಾರೆ.

YouTube, ಕ್ರಿಯೇಟರ್‌ ಗಳಿಗೆ ಪ್ರೇಕ್ಷಕರನ್ನು ನಿರ್ಮಿಸಲು ಅವಕಾಶ ನೀಡುವುದಲ್ಲದೆ, ವ್ಯಾಪಾರವನ್ನು ನಿರ್ಮಿಸಲು ಅವರಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. YouTube ಎಲ್ಲಾ ರೀತಿಯ ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತಿರುವ ಸ್ಥಳವಾಗಿದೆ. ವಿಶೇಷವಾಗಿ ಸಣ್ಣ ವ್ಯಾಪಾರಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ವೇದಿಕೆಯು ಜಾಹೀರಾತು-ಚಾಲಿತ ಮಾಧ್ಯಮ ವೇದಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

“ನಾವು ನಮ್ಮ ವೇದಿಕೆಯಲ್ಲಿ ಸೃಜನಾತ್ಮಕ ಯಶಸ್ಸಿನ ದೃಷ್ಟಿಯಿಂದ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳನ್ನು ಪ್ರತಿನಿಧಿಸಿದ್ದೇವೆ ಮತ್ತು ಲಿಂಗ ವೈವಿಧ್ಯತೆಯನ್ನು ಹೊಂದಿದ್ದೇವೆ. ವೇದಿಕೆಯು ವಿಷಯ ರಚನೆಕಾರರು ಮತ್ತು ಬಳಕೆದಾರರಿಗಾಗಿ ಸುರಕ್ಷಿತ ಮತ್ತು ಅಂತರ್ಗತ ಸ್ಥಳವಾಗಿ ಉಳಿಯುತ್ತದೆ ಎಂದು ಖಚಿತಪಡಿಸಲು ಸಹಾಯ ಮಾಡುವ ಸಾಧನಗಳನ್ನು ನಾವು ಹೊಂದಿದ್ದೇವೆ” ಎಂದು YouTube ಮುಖ್ಯ ಉತ್ಪನ್ನ ಅಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!