ಕಳೆದ ಎರಡು ವರ್ಷದಲ್ಲಿ ಜಿಎಸ್‌ಟಿ ವಂಚನೆಯಾದದ್ದೆಷ್ಟು? ಬಂಧನಕ್ಕೊಳಗಾದವರೆಷ್ಟು ? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಿಎಸ್‌ಟಿ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ‌ ಒಟ್ಟೂ 55,575 ಕೋಟಿ ರೂ.ಗಳ ಜಿಎಸ್‌ಟಿ ವಂಚನೆಯನ್ನು ಪತ್ತೆಹಚ್ಚಿದ್ದಾರೆ ಮತ್ತು ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಕ್ಕಾಗಿ 700 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. 22,300 ನಕಲಿ GST ಗುರುತಿನ ಸಂಖ್ಯೆಗಳನ್ನು (GSTIN) GST ಗುಪ್ತಚರ ನಿರ್ದೇಶನಾಲಯದ (DGGI) ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಸರ್ಕಾರವು ನವೆಂಬರ್ 9, 2020 ರಂದು, ನಕಲಿ/ಬೋಗಸ್ ಇನ್‌ವಾಯ್ಸ್‌ಗಳನ್ನು ನೀಡುವ ಮೂಲಕ ವಂಚನೆಯಿಂದ ಇನ್‌ಪುಟ್ ತೆರಿಗೆ ಕ್ರೆಡಿಟ್ (ITC) ಅನ್ನು ಪಡೆಯುವ ಮತ್ತು ರವಾನಿಸುವ ನಿರ್ಲಜ್ಜ ಘಟಕಗಳ ವಿರುದ್ಧ ರಾಷ್ಟ್ರವ್ಯಾಪಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಿತು, ಆ ಮೂಲಕ ಸರಕು ಮತ್ತು ಸೇವಾ ತೆರಿಗೆ (GST) ಅನ್ನು ತಪ್ಪಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಯಿತು.

ವಿಶೇಷ ಅಭಿಯಾನದ ಎರಡು ವರ್ಷಗಳಲ್ಲಿ 55,575 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ/ಐಟಿಸಿ ವಂಚನೆ ಪತ್ತೆಯಾಗಿದೆ. 719 ಜನರನ್ನು ಬಂಧಿಸಲಾಗಿದೆ, ಇದರಲ್ಲಿ 20 ಸಿಎ/ಸಿಎಸ್ ವೃತ್ತಿಪರರು ಸೇರಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಈ ಅವಧಿಯಲ್ಲಿ 3,050 ಕೋಟಿ ರೂಪಾಯಿ ಮೌಲ್ಯದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸ್ವಯಂಪ್ರೇರಿತ ಠೇವಣಿಗಳನ್ನು ಮಾಡಲಾಗಿದೆ. ಅಧಿಕಾರಿಗಳು ಈ ಪ್ರಕರಣಗಳಲ್ಲಿ ವಸೂಲಾತಿ ಮೊತ್ತವನ್ನು ಬಹಿರಂಗಪಡಿಸಲಿಲ್ಲ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!