Thursday, August 11, 2022

Latest Posts

ಸಲ್ಮಾನ್ ಖಾನ್ ಬಾಡಿಗಾರ್ಡ್‌ಗೆ ಇಷ್ಟೊಂದು ಸಂಬಳಾನಾ? ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತೀರಾ..

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್‌ನ ಭಾಯ್ ಸಲ್ಮಾನ್ ಖಾನ್ ಬಾಡಿಗಾರ್ಡ್ ಸಂಬಳ ಎಷ್ಟು ಗೊತ್ತಾ?
ಸಲ್ಮಾನ್ ಬಾಡಿಗಾರ್ಡ್ ಶೇರಾ ಅವರಿಗೆ 15 ಲಕ್ಷ ಸಂಬಳ ಕೊಡ್ತಾರಂತೆ ಸಲ್ಮಾನ್. ಈ ಹಿಂದೆ ಸಲ್ಮಾನ್‌ಗೆ ಬೆದರಿಕೆ ಕರೆ ಬಂದಿದ್ದಾಗ, ನಾನೆಂದೂ ಭಾಯ್ ಹಿಂದೆ ಇರುವುದಿಲ್ಲ. ಅವರ ಮುಂದೆ ಎದೆಯುಬ್ಬಿಸಿ ನಿಂತಿರುತ್ತೇನೆ ಎಂದು ಶೇರಾ ಹೇಳಿದ್ದರು.
ಶೇರಾ ಅನೇಕ ವರ್ಷದಿಂದ ಸೆಕ್ಯುರಿಟಿ ಏಜೆನ್ಸಿ ಸಹ ನಡೆಸುತ್ತಿದ್ದು, ದೇಶ-ವಿದೇಶದ ಹೈಪ್ರೊಪೈಲ್ ವ್ಯಕ್ತಿಗಳಿಗೆ ಭದ್ರತೆ ನೀಡುತ್ತಾ ಬಂದಿದ್ದಾರೆ. ವರ್ಷಕ್ಕೆ ಎರಡು ಕೋಟಿ ದುಡಿಯುವ ಶೇರಾ ಕೇವಲ ಸಲ್ಮಾನ್ ಬಾಡಿಗಾರ್ಡ್ ಅಷ್ಟೇ ಅಲ್ಲ, ಅವರ ಸ್ನೇಹಿತ ಕೂಡ. ಈ ಮಾಹಿತಿಯನ್ನು ಶೇರಾ ನಿರಾಕರಿಸಿದ್ದು, ಒಂದೊಂದು ಕಡೆ ನನ್ನ ಸಂಬಳ ಒಂದೊಂದು ಅಮೌಂಟ್ ಎಂದು ಹೇಳುತ್ತಾರೆ ಎಂದು ಸುಮ್ಮನಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss