ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲೇಡೀಸ್.. ಒಳಉಡುಪುಗಳನ್ನು ಖರೀದಿಸೋಕೂ ಮುನ್ನ ಇದನ್ನು ಓದಿ.. ನಿಮ್ಮ ಖರೀದಿಗೆ ಸಹಾಯ ಆಗುವಂಥ ಟಿಪ್ಸ್ ಇಲ್ಲಿದೆ…

ಬಟ್ಟೆಗಳನ್ನು ಖರೀದಿ ಮಾಡೋಕೆ ಎಷ್ಟು ದುಡ್ಡಾಗುತ್ತದೋ ಇನ್ನರ್‌ವೇರ‍್ಸ್ ಖರೀದಿ ಇನ್ನೂ ದುಬಾರಿ. ಅದರಲ್ಲೂ ಅಷ್ಟು ದುಡ್ಡು ಕೊಟ್ಟರೂ ಕಂಫರ್ಟ್‌ಬಲ್ ಆದ ಇನ್ನರ್‌ವೇರ‍್ಸ್ ಸಿಗೋದಿಲ್ಲ. ಇನ್ನರ್‌ವೇರ್ ಖರೀದಿಗೂ ಮುನ್ನ ಈ ಟಿಪ್ಸ್ ಫಾಲೋ ಮಾಡಿ…

  • ಅಳತೆ ತಿಳಿದುಕೊಳ್ಳಿ: ಸರಿಯಾದ ಬ್ರಾ ಅಥವಾ ಪ್ಯಾಂಟೀಸ್ ಖರೀದಿ ಮಾಡಬೇಕು ಎಂದರೆ ಮೊದಲು ನಿಮ್ಮ ಅಳತೆ ಸರಿಯಾಗಿರಲಿ. ಟೇಪ್ ಬಳಸಿ ಅಳತೆ ಮಾಡಬಹುದು.
  • ಕಪ್ ಸೈಜ್ ತಿಳಿದಿರಲಿ: ಬ್ರಾ ಕೊಳ್ಳುವಾಗ ಸುತ್ತಳತೆ ಒಂದಾದರೆ ಕಪ್ ಸೈಜ್ ಬೇರೆ ಇರುತ್ತದೆ. ಅಂದಾಜಿನ ಮೇಲೆ ಕೊಳ್ಳದೆ ಸರಿಯಾದ ಕಪ್ ಸೈಜ್ ತಿಳಿದುಕೊಳ್ಳಿ. ಇದರಿಂದ ಬ್ರಾ ಖರೀದಿ ಈಸಿ ಆಗುತ್ತದೆ. ಆನ್‌ಲೈನ್‌ನಲ್ಲಿ ಸಹ ಖರೀದಿ ಮಾಡಬಹುದು.
  • ಯಾವ ರೀತಿ ಬೇಕು? : ಬ್ರಾ ಅಥವಾ ಪ್ಯಾಂಟೀಸ್‌ನಲ್ಲಿ ನೂರಾರು ರೀತಿ ಇದೆ. ನಿಮಗೆ ಯಾವುದು ಬೇಕು ತಿಳಿದುಕೊಳ್ಳಿ. ವೈರ್ ಇರುವುದು ಅಥವಾ ಇಲ್ಲದಿರುವುದು, ಫುಲ್ ಕವರೇಜ್, ಪ್ಯಾಡೆಡ್ ಅಥವಾ ನಾನ್ ಪ್ಯಾಡೆಡ್ ಹೀಗೆ ವ್ಯತ್ಯಾಸ ತಿಳಿದುಕೊಳ್ಳಿ.
  • ತಿಳಿ ಬಣ್ಣದ ಒಳ ಉಡುಪು: ನಿಮ್ಮ ಬಳಿ ಎಲ್ಲ ಬಣ್ಣದ ಒಳಉಡುಪುಗಳು ಇರಲಿ. ಸ್ಕಿನ್ ಕಲರ್ ಇದ್ದರೆ ಒಳಿತು, ಇದರ ಮೇಲೆ ಯಾವ ಬಟ್ಟೆ ಹಾಕಿದರೂ ಇನ್ನರ್‌ವೇರ‍್ಸ್ ಕಾಣುವುದಿಲ್ಲ.
  • ಸರಿಯಾಗಿ ಹಾಕಿ: ಸರಿಯಾದ ಒಳಉಡುಪು ಖರೀದಿ ಜೊತೆಗೆ ಸರಿಯಾದ ರೀತಿಯಲ್ಲಿ ಹಾಕಿಕೊಳ್ಳುವುದು ತುಂಬಾನೇ ಮುಖ್ಯ.
  • ಸರಿಯಾಗಿ ಇಟ್ಟುಕೊಳ್ಳಿ: ಇನ್ನರ್‌ವೇರ‍್ಸ್‌ಗಳು ಮಾಮೂಲಿ ಬಟ್ಟೆಗಿಂತಲೂ ಸೂಕ್ಷ್ಮ. ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿ ಹಾಕಿ, ನಂತರ ಉಪಯೋಗಿಸಿ.
  • ಕೈಯಲ್ಲೇ ಒಗೆಯಿರಿ: ಬ್ರಾಗಳನ್ನು ವಾಶಿಂಗ್ ಮಶೀನ್‌ಗೆ ಹಾಕುವ ಬದಲು ಕೈಯಲ್ಲಿ ಒಗೆಯುವುದು ಒಳ್ಳೆಯದು. ವಾಶಿಂಗ್ ಮಶೀನ್‌ನಲ್ಲಿ ಸುತ್ತಿ, ಡ್ರೈ ಆಗಿ ಬರುವುದರೊಳಗೆ ಅದರ ಶೇಪ್‌ನಲ್ಲಿ ಬದಲಾವಣೆ ಆಗುತ್ತದೆ. ಹೀಗಾಗಿ ಕೈಯಲ್ಲಿ ಒಗೆಯುವುದೇ ಸೂಕ್ತ.
  • ಆಫರ್ ನೋಡಿ: ಒಂದೇ ಬ್ರಾ ಅಥವಾ ಪ್ಯಾಂಟೀಸ್ ಖರೀದಿ ಮಾಡುವ ಬದಲು ಆಫರ್‌ಗಾಗಿ ಕಾಯಿರಿ. ಎರಡು ಅಥವಾ ಮೂರು ಸೆಟ್ ಕಡಿಮೆ ಹಣಕ್ಕೆ ದೊರೆಯುತ್ತದೆ. ಆಗ ನೀವು ಕೊಳ್ಳಬಹುದು.
  • ಟ್ರೈ ಮಾಡಿ ಬಳಸಿ: ಯಾವುದೇ ಇನ್ನರ್‌ವೇರ್ ಖರೀದಿಗೂ ಮುನ್ನ ಟ್ರೈ ಮಾಡಿ. ಇದರಿಂದ ಅದು ನಿಮ್ಮ ಸೈಜ್‌ಗೆ ಹೊಂದಿದರೆ ಮಾತ್ರ ತೆಗೆದುಕೊಳ್ಳಿ. ಅಂಗಡಿಗಳಲ್ಲಿ ಈ ಅವಕಾಶ ಇಲ್ಲದಿದ್ದರೆ ಬರೀ ಇನ್ನರ್‌ವೇರ್‌ಗಳದ್ದೇ ಆಪ್‌ಗಳಿವೆ. ಅಲ್ಲಿಂದ ನೀವು ನಿಮಗೆ ಬೇಕಾದ್ದನ್ನು ಖರೀದಿಸಿ, ಸೈಜ್ ಹೊಂದದಿದ್ದರೆ ವಾಪಾಸ್ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss