ಸಾಮಾನ್ಯವಾಗಿ ಎಲ್ಲಾ ಮೊಬೈಲ್ ಗಳಲ್ಲೂ ಪಾಸ್ ವರ್ಡ್ ಗಳನ್ನು ಆಟೋ ಸೇವ್ ಮಾಡಿಟ್ಟಿರುತ್ತೇವೆ. ಆದರೆ ಅಗತ್ಯ ಬಿದ್ದಾಗ ಈ ಪಾಸ್ ವರ್ಡ್ ನೆನಪುಳಿಯೋದೆ ಕಷ್ಟ..ಹಾಗೆ ಈ ಐಫೋನ್ ನಲ್ಲಿ ಪಾಸ್ ವರ್ಡ್ ವರೆತು ಹೋದರೆ ಆಪ್ಸ್ ಡೌನ್ ಲೋಡ್ ಮಾಡೋಕೆ, ಕ್ಲೌಡ್ ಓಪನ್ ಮಾಡೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ಆದರೆ ಹೊಸ ಪಾಸ್ ವರ್ಡ್ ಕೊಡೋಕೆ ಇಲ್ಲಿದೆ ಸಿಂಪಲ್ ಸ್ಟೆಪ್ಸ್
- ಮೊದಲು Settings ಓಪನ್ ಮಾಡಿ.
- ಅಲ್ಲಿ Apple ID ಮೇಲೆ ಕ್ಲಿಕ್ ಮಾಡಿ.
- ಬಳಿಕ ಅಲ್ಲಿರುವ password & security ಆಯ್ಕೆ ಮಾಡಿಕೊಳ್ಳಿ.
- Change password ಆಪ್ಷನ್ ಆಯ್ಕೆ ಮಾಡಿಕೊಂಡರೆ ಅಲ್ಲಿ ನಿಮಗೆ ಮೊಬೈಲ್ ಪಾಸ್ ವರ್ಡ್ ಕೇಳುತ್ತದೆ. ಅದನ್ನು ನಮೂದಿಸಿದರೆ ನಿಮಗೆ ಹೊಸ ಪಾಸ್ ವರ್ಡ್ ಹೊಂದಿಸುವ ಆಯ್ಕೆ ಸಿಗುತ್ತದೆ.
- ಅಲ್ಲಿ ನೀವು ಹೊಸ ಪಾಸ್ ವರ್ಡ್ ಟೈಪ್ ಮಾಡಿದರೆ ಆಯ್ತು