ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಾಡುತ್ತಿದ್ಯಾ? ಈ ಆಹಾರಗಳನ್ನು ಸೇವಿಸಿ ನೋಡಿ

ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾದಾಗ ಕೊಲೆಸ್ಟ್ರಾಲ್ ಸಮಸ್ಯೆ ಉಂಟಾಗುತ್ತದೆ. ತೂಕ ಹೆಚ್ಚಾಗುವುದು, ಕ್ರಿಯಾಶೀಲತೆ ಇಲ್ಲದೆ ಆಲಸ್ಯ ಮನೋಭಾವದಿಂದ ಇರುವುದು ಕೂಡ ಕೊಲೆಸ್ಟ್ರಾಲ್ ಸಮಸ್ಯೆಯ ಲಕ್ಷಣಗಳು. ಆದರೆ ಈ ಕೊಲೆಸ್ಟ್ರಾಲ್ ನಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಿದರೆ ಉತ್ತಮ.

ವಿಟಮಿನ್:
ದೇಹಕ್ಕೆ ಅಗತ್ಯವಿರುವ ವಿಟಮಿನ್ ಬಿ, ಇ, ಸಿ ಅಂಶಗಳು ಹೆಚ್ಚಾಗಿ ಬೇಕಾಗಿದ್ದು, ಈ ನಿಟ್ಟಿನಲ್ಲಿ ಕಿತ್ತಳೆ, ಸೊಪ್ಪುಗಳು, ಚಿಕನ್, ಅಣಬೆ, ಬಾದಾಮಿಯಂತಹ ವಿಟಮಿನ್ ಆಹಾರ ಸೇವಿಸಬೇಕು.

ಮೀನು ಎಣ್ಣೆ:
ಇದರಲ್ಲಿರುವ ಒಮೆಗಾ 3 ಅಂಶವು ದೇಹದಲ್ಲಿನ ಕೆಟ್ಟ ಕೊಲಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರಾಗುತ್ತದೆ.

ಕೊಬ್ಬರಿ ಎಣ್ಣೆ:
ಇದು ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿ ಇರಿಸಲು ಸಹಕಾರಿಯಾಗುತ್ತದೆ. ಇದರಿಂದ ರಕ್ತ ಶುದ್ಧವಾಗಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ:
ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿ ಸೇರಿಸುವುದರಿಂದ ಕೊಲೆಸ್ಟ್ರಾಲ್ ಅಂಶ ಕ್ರಮೇಣ ಕಡಿಮೆಯಾಗುತ್ತದೆ.

ಗ್ರೀನ್ ಟೀ:
ಇದು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಗ್ರೀನ್ ಟೀ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ದಾಳಿಂಬೆ:
ಇದನ್ನು ನೀವು ಜ್ಯೂಸ್ ಅಥವಾ ಹಣ್ಣಿನ ರೀತಿಯಲ್ಲಿ ಸೇವಿಸಬಹುದು. ಇದರಲ್ಲಿರುವ ಆಂಟಿ ಆಕ್ಸಿಡೆಂಡ್ಸ್ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss