Tuesday, August 16, 2022

Latest Posts

ಒಂದೇ ಭಂಗಿಯಲ್ಲಿ ಕುಳಿತು ಬೆನ್ನು ನೋವು ಬಂದಿದ್ಯಾ? ಹಾಗಿದ್ದರೆ ನೀವು ಈ ತಪ್ಪುಗಳನ್ನು ಮಾಡಬೇಡಿ

ಸಾಮಾನ್ಯವಾಗಿ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಕಾಡುವ ಬೆನ್ನು ನೋವು ಸಮಸ್ಯೆಗೆ ನಾವು ಕುಳಿತುಕೊಳ್ಳುವ ಭಂಗಿಯೇ ಕಾರಣ. ಹಾಗಿದ್ದರೆ ನಾವು ಯಾವ ಭಂಗಿಯಲ್ಲಿ ಕುಳಿತರೆ ಬೆನ್ನು ನೋವು ಬರೋದಿಲ್ಲ..

  • ಕಂಪ್ಯೂಟರ್ ಮುಂದೆ ಕೆಲಸ ಮಾಡುವಾಗ ಅಥವಾ ಓದುವಾಗ ಹೆಚ್ಚು ಕೆಳಗೆ ಬಗ್ಗ ಬೇಡಿ. ತುಂಬಾ ಬಗ್ಗುವುದರಿಂದ ಬೆನ್ನು ನೋವು ಹೆಚ್ಚಾಗುತ್ತದೆ. ನೀವು ಬಳಸುವ ವಸ್ತುಗಳು ಆದಷ್ಟು ನಿಮ್ಮ ಕುತ್ತಿಗೆ ನೇರಕ್ಕೆ ಇರಲಿ.
  • ಕುಳಿತು ಕೆಲಸ ಮಾಡುವಾಗ ಆದಷ್ಟು ನಿಮ್ಮ ಮೊಣ ಕೈಗಳು ನಿಮ್ಮ ದೇಹದ ಹತ್ತಿರದಲ್ಲೇ ಇರಲಿ. ಇಲ್ಲದಿದ್ದರೆ ನಿಮ್ಮ ಭುಜಗಳು ಮತ್ತು ಮೇಲಿನ ಬೆನ್ನಿನ ಮೇಲೆ ನೀವು ಹೆಚ್ಚು ಒತ್ತಡವಾಗುತ್ತದೆ.
  • ಕೆಲವರು ಕೆಲಸ ಮಾಡುವಾಗ, ಕೈ ಬಿಡುವಿಲ್ಲದಿದ್ದಾಗ ಭುಜದ ಸಹಾಯದಿಂದ ತಮ್ಮ ಫೋನ್ ಗಳನ್ನು ಬಳಸುತ್ತಾರೆ. ಫೋನ್ ಅನ್ನು ಅವರ ಭುಜ ಮತ್ತು ಕಿವಿಯ ನಡುವೆ ಇರಿಸುವುದರಿಂದ ನಿಮ್ಮ ಕುತ್ತಿಗೆ ಹಾಗೂ ಬೆನ್ನಿನ ಮೇಲ್ಬಾಗಕ್ಕೆ ಒತ್ತಡವಾಗುತ್ತದೆ.
  • ಕುಳಿತು ಕೆಲಸ ಮಾಡುವವರು ಸುಮಾರು 8-10 ಗಂಟೆಗಳ ಕಾಲ ಕುಳಿತೇ ಇರುತ್ತಾರೆ. ಇದರಿಂದ ಹೆಚ್ಚು ಬೆನ್ನು ನೋವು ಕಾಡುತ್ತದೆ. ಹಾಗಾಗಿ ಕೆಲಸದ ನಡುವೆ ಒಂದು ಸ್ವಲ್ಪ ವಾಕ್ ಮಾಡುವುದು ನಿಮಗೆ ಬೆನ್ನು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss