Friday, March 5, 2021

Latest Posts

ಯಶಸ್ಸು ಗಳಿಸುವುದು ಹೇಗೆ ಎಂದು ಕೇಳಿದರೆ ನೀರಿನಲ್ಲೇ ಮುಳುಗಿಸಿಬಿಟ್ರು.. ಮುಂದೇನಾಯ್ತು?

ಯುವಕನೊಬ್ಬ ತನ್ನ ಬಳಿ ಇದ್ದ ನೂರಾರು ಡೌಟ್‌ಗಳನ್ನು ಹೊತ್ತು ಗುರುಗಳೊಬ್ಬರನ್ನು ಭೇಟಿ ಮಾಡಿದ.
ಅವನ ಸುತ್ತಮುತ್ತ ಇದ್ದವರೆಲ್ಲರೂ ಅವನಿಗಿಂತ ಯಶಸ್ಸು ಪಡೆದಿದ್ದರು. ‘ ಕಾಲೇಜಿನಲ್ಲಿ ನಾನೆ ಅವರಿಗಿಂತ ಚೆನ್ನಾಗಿ ಓದುತ್ತಿದ್ದೆ. ಆದರೆ ಜೀವನದಲ್ಲಿ ಅವರು ನನಗಿಂತ ಹೆಚ್ಚು ಯಶಸ್ಸು ಕಂಡಿದ್ದಾರೆ. ಇದನ್ನು ನನಗೆ ಸಹಿಸಲು ಆಗುತ್ತಿಲ್ಲ. ನನಗೂ ಯಶಸ್ಸು ಬೇಕು ಅದಕ್ಕೇನು ಮಾಡಲಿ? ಯಶಸ್ಸು ಸಾಧಿಸುವುದು ಹೇಗೆ’ ಎಂದು ಆ ಯುವಕ ಗುರುಗಳ ಬಳಿ ಕೇಳಿದ.
ಗುರುಗಳು ‘ಈಗ ನಾನು ನಿನ್ನ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಾಳೆ ಬೆಳಗ್ಗೆ ನದಿಯ ಬಳಿ ಬಾ ಅಲ್ಲಿ ಮಾತನಾಡೋಣ’  ಎಂದರು.
ಇದಕ್ಕೆ ಒಪ್ಪಿದ ಯುವಕ ನಾಳೆ ಬೆಳಗಿಗಾಗಿ ಕಾಯುತ್ತಾ ಕುಳಿತ.
ಅಂತೂ ಬೆಳಗ್ಗೆಯಾಯಿತು. ಎದ್ದವನೇ ಸೀದ ನದಿಯ ಬಳಿ ಹೋದ. ಗುರುಗಳು ಇವನಿಗಿಂತ ಮುನ್ನವೇ ಬಂದು ನಿಂತಿದ್ದರು. ಇಬ್ಬರು ನದಿಯ ಒಳಗೆ ಇಳಿದರು. ಮುಂದೆ ಹೋಗುತ್ತಲೇ ಇದ್ದರು. ಯುವಕ ‘ ಗುರುಗಳೇ ಇನ್ನು ಒಂದು ಹೆಜ್ಜೆ ಮುಂದಿಟ್ಟರೂ ನಾನು ಮುಳುಗಿ ಹೋಗುತ್ತೇನೆ ನನಗೆ ಈಜಲು ಬರುವುದಿಲ್ಲ’ ಎಂದ. ಗುರುಗಳು ನಗುತ್ತಲೆ ಒಂದು ಹೆಜ್ಜೆ ಮುಂದೆ ಹೋದರು. ಈತನನ್ನೂ ಎಳೆದುಕೊಂಡು ಮುಳುಗಿಸಿದರು. ಯುವಕ ಮೇಲೇಳಲು ಎಷ್ಟು ಕಷ್ಟಪಟ್ಟರೂ ಗುರುಗಳು ಆತನನ್ನು ನೀರಿನಲ್ಲಿ ಮುಳುಗಿಸಿ ಇಟ್ಟಿದರು. ಕೆಲ ನಿಮಿಷಗಳ ಬಳಿಕ ಆತನನ್ನು ಮೇಲೆತ್ತಿದ್ದರು. ಏದುಸಿರು ಬಿಡುತ್ತಾ, ಹೊರಗಿದ್ದ ಗಾಳಿಯೆಲ್ಲಾ ತನ್ನದೇ ಎನ್ನುವಂತೆ ಉಸಿರಾಡಿದ. ಗುರುಗಳನ್ನು ನೋಡಿ ‘ನನ್ನನ್ನು ಏಕೆ ಕೊಲ್ಲುತ್ತಿದ್ದೀರಿ’ ಎಂದು ಕೂಗಾಡಿದ.
‘ನೆನ್ನೆ ನೀನು ನನಗೆ ಪ್ರಶ್ನೆ ಕೇಳಿದೆ, ಇಂದು ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ’ ಎಂದರು.
ನಂತರ ‘ನಿನಗೆ ನೀರಲ್ಲಿ ಮುಳುಗಿದಾಗ ಎಲ್ಲದಕ್ಕಿಂತ ಹೆಚ್ಚಾಗಿ ಏನು ಬೇಕು ಅನಿಸಿತ್ತು? ‘ಎಂದು ಕೇಳಿದರು.
ಆತ ಕ್ಷಣವೂ ಯೋಚಿಸದೇ ‘ಗಾಳಿ ಬೇಕು ‘ಎಂದ.
‘ಇದೇ ನೀನು ನಿನ್ನೆ ಕೇಳಿದ ಪ್ರಶ್ನೆಗೆ ಉತ್ತರ. ಯಶಸ್ಸು ಬೇಕು ಎಂದ ತಕ್ಷಣ ಸಿಗುವ ವಸ್ತುವಲ್ಲ, ನೀರಿನಲ್ಲಿದ್ದಾಗ ಗಾಳಿ ಎಷ್ಟು ಅವಶ್ಯ ಎನಿಸಿತ್ತೋ ಹೊರಗೆ ಬಂದಾಗ ನಿನಗೆ ಯಶಸ್ಸು ಅಷ್ಟೇ ಮುಖ್ಯ ಅನಿಸಬೇಕು. ಆಗ ಮಾತ್ರ ಯಶಸ್ಸು ನಿನಗೆ ಪ್ರಾಪ್ತಿಯಾಗುತ್ತದೆ’ ಎಂದರು.
ಹೌದಲ್ವಾ? ಬೇರೆಯವರಿಗೆ ನಮ್ಮನ್ನು ಹೋಲಿಸಿಕೊಂಡೇ ಜೀವನ ಮಾಡುತ್ತೇವೆ. ಅವರ ಯಶಸ್ಸನ್ನು ಕಂಡು ಹೊಟ್ಟೆ ಉರಿದುಕೊಳ್ಳುತ್ತೇವೆ. ಆದರೆ ಅದರ ಹಿಂದಿನ ಕಥೆ ನಮಗೇನು ಗೊತ್ತು? ಆ ಯಶಸ್ಸನ್ನು ಸಾಧಿಸಲು ಅವರೇನು ಮಾಡಿದ್ದಾರೋ ನಮಗೂ ತಿಳಿದಿಲ್ಲ.. ಅವರಷ್ಟೇ ನಮಗೂ ಒಂದು ವಿಷಯದ ಮೇಲೆ ಹಿಡಿತ ಸಿಕ್ಕಾಗ ನಮಗೂ ಕೂಡ ಯಶಸ್ಸು ದೊರೆಯುತ್ತದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss