ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ತಿಗಣೆಯನ್ನು ಮನೆಯಿಂದ ಹೋಗಲಾಡಿಸೋದು ತುಂಬಾ ಕಷ್ಟಪಡುತ್ತೇವೆ. ಅದು ಮನೆಯ ಯಾವುದೊ ಮೂಲೆಯಿಂದ ಬಂದು ನಮ್ಮ ಹಾಸಿಗೆ, ಬಟ್ಟೆಗಳಲ್ಲಿ ಅಡಗಿರುತ್ತವೆ. ಇದಕ್ಕೆ ಮನೆಯಲ್ಲಿಯೇ ನೀವು ಮನೆಮದ್ದು ತಯಾರಿಸಬಹುದು..
ಅಡುಗೆ ಸೋಡಾ: ನೀರಿನಲ್ಲಿ ಅಡುಗೆ ಸೋಡಾ ಬೆರಸಿ ಅದನ್ನು ತಿಗಣೆ ಇರುವ ಜಾಗಗಳಲ್ಲಿ ಸಿಂಪಡಿಸಿದರೆ ತಿಗಣೆ ದೂರವಾಗುತ್ತದೆ.
ಬೇವಿನ ಎಣ್ಣೆ: ತಿಗಣೆ ಇರುವ ಸ್ಥಳಗಳಲ್ಲಿ ಬೇವಿನ ಎಣ್ಣೆಯನ್ನು ಸಿಂಪಡಿಸಬಹುದು. ಬಳಿಕ ಬಟ್ಟೆಗಳನ್ನು ಒಗೆದು ಬಳಸಬಹುದು.
ಮದ್ಯ: ಹಾಸಿಗೆಯ ಅಂಚುಗಳು, ಪೀಠೋಪರಗಳು ಸೇರಿದಂತೆ ಮನೆಯ ಯಾವುದೇ ಸ್ಥಳದಲ್ಲಾದರೂ ಮದ್ಯವನ್ನು ಸಿಂಪಡಿಸಬಹುದಾಗಿದೆ.
ಉಪ್ಪು: ತಿಗಣ ಹೆಚ್ಚಿರುವ ಸ್ಥಳಗಳಲ್ಲಿ ಉಪ್ಪನ್ನು ಹಾಕಿದರೆ ತಿಗಣೆ ಸಾಯುತ್ತದೆ. ನೀರಿನೊಂದಿಗೆ ಉಪ್ಪು ಬೆರಸಿ ಸಿಂಪಡಿಸಬಹುದು.
ಈರುಳ್ಳಿ ರಸ: ಇದರ ಘಾಟಿನ ವಾಸಗೆ ತಿಗಣೆಗಳು ಸಾಯುತ್ತದೆ. ಹಾಗಾಗಿ ಮನೆಯಲ್ಲಿ ತಿಗಣೆ ಹೋಗಲಾಡಿಸಲು ಈ ವಿಧಾನವೂ ಪರಿಣಾಮಕಾರಿಯಾಗಿದೆ.