ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಮಕ್ಕಳೇ, ಬಟ್ಟೆ ಮೇಲೆ ಕಾಡುವ ಈ ಪ್ರಾಬ್ಲೆಮ್ ಹೈರಾಣಾಗಿಸಿದ್ಯಾ? ಇಲ್ಲಿದೆ ಪರಿಹಾರ!

ಹುಡುಗಿಯರ ಸಮಸ್ಯೆ ಒಂದಾ ಎರಡಾ? ಈ ಸಣ್ಣ ಪುಟ್ಟ ಸಮಸ್ಯೆಗಳಿಗೆ ಹೆಣ್ಮಕ್ಕಳೇ ಪರಿಹಾರ ಹುಡುಕಬೇಕು. ಇದರಲ್ಲಿ ಬಟ್ಟೆಯ ಮೇಲೆ ನಿಪ್ಪಲ್ ಪಾಯಿಂಟ್ ಕಾಣಿಸುವ ಸಮಸ್ಯೆ ಕೂಡ ಒಂದು. ಇದನ್ನು ಹೈಡ್ ಮಾಡೋಕೆ ಸಾಹಸವೇ ಮಾಡಬೇಕಾಗುತ್ತದೆ.  ನಿಪ್ಪಲ್‌ಗಳು ಹಾರ್ಡ್ ಆಗುತ್ತವೆ. ಆಗ ಬಟ್ಟೆ ಮೂಲಕವೂ ಅವು ಕಾಣುತ್ತವೆ. ಇದರಿಂದ ಮಹಿಳೆಯರಿಗೆ ಮುಜುಗರ ಉಂಟಾಗುತ್ತದೆ. ಈ ಮುಜುಗರ ತಪ್ಪಿಸೋಕೆ ಹೀಗೆ ಮಾಡಿ…

ಶಾಲ್ ಅಥವಾ ಸ್ಕಾರ್ಫ್ ಬಳಸಿ: ನೀವು ಯಾವುದೇ ಡ್ರೆಸ್ ಹಾಕಿರಲಿ. ಬ್ಯಾಗ್‌ನಲ್ಲಿ ಒಂದು ಶಾಲ್ ಇರಲಿ. ನಿಪ್ಪಲ್ ಕಾಣಿಸುತ್ತಿದೆ ಎಂದು ಅನಿಸಿದ ತಕ್ಷಣ ಸ್ಕಾರ್ಫ್ ಹಾಕಿಬಿಡಿ. ಇದರಿಂದ ನೀವು ಕಂಫರ್ಟ್‌ಬಲ್ ಆಗಿ ಇರಬಹುದು.

ಪ್ಯಾಡೆಡ್ ಬ್ರಾ: ಮಹಿಳೆಯರು ಯಾವ ರೀತಿ ಬ್ರಾ ಧರಿಸುತ್ತಾರೆ ಎನ್ನುವುದೂ ಮುಖ್ಯ. ನಾರ್ಮಲ್ ಬ್ರಾದಲ್ಲಿ ಪಾಯಿಂಟ್ ಕಾಣಿಸುವುದು ಸಾಮಾನ್ಯ. ಆದಷ್ಟು ಪ್ಯಾಡೆಡ್ ಬ್ರಾಗಳನ್ನು ಬಳಸಿ.

ಹತ್ತಿ ಸಹಾಯಕ: ಕೆಲವರಿಗೆ ಚಳಿಯೂ ಆಗದೇ ಕೂಡ ನಿಪ್ಪಲ್ ಎರೆಕ್ಟ್ ಆಗಿರುತ್ತದೆ. ಇಂಥವರು ಹತ್ತಿ ಬಳಸಿ. ಬ್ರಾ ಒಳಗೆ, ನಿಪ್ಪಲ್ ಮೇಲೆ ಹತ್ತಿಯನ್ನು ಹರಡಿ. ಇದರಿಂದ ಬಟ್ಟೆ ಮೇಲೆ ಪಾಯಿಂಟ್ಸ್ ಕಾಣುವುದಿಲ್ಲ.

ಜಾಕೆಟ್: ಟ್ರಾವೆಲ್ ಮಾಡುವ ಸಂದರ್ಭ ಹೆಚ್ಚು ಚಳಿ ಇರುತ್ತದೆ. ಈ ವೇಳೆ ಜಾಕೆಟ್ ನಿಮ್ಮ ಬಳಿ ಇರಲಿ. ಇದರಿಂದ ನೀವು ಮುಜುಗರಕ್ಕೊಳಗಾಗದೇ ಆರಾಮಾಗಿ ಇರಬಹುದು.

ಯಾವ ಬಟ್ಟೆ ಹಾಕ್ತೀರಾ?: ಆದಷ್ಟು ಗಾಢ ಬಣ್ಣದ ಹಾಗೂ ಮಲ್ಟಿ ಕಲರ್‌ನ ಬಟ್ಟೆಗಳನ್ನು ಹಾಕಿ. ಇದರಲ್ಲಿ ನಿಪ್ಪಲ್ ಎರೆಕ್ಟ್ ಆದರೂ ಅಷ್ಟಾಗಿ ಕಾಣುವುದಿಲ್ಲ. ಈ ಬದಲಾವಣೆಯನ್ನು ಯಾರೂ ಕಂಡುಹಿಡಿಯುವುದೂ ಇಲ್ಲ.

ನಿಪ್ಪಲ್ ಶೀಲ್ಡ್ ಬಳಸಿ: ಇದನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ನಿಪ್ಪಲ್ ಮಾತ್ರ ಕವರ್ ಆಗುವ ಈ ಶೀಲ್ಡ್‌ನನ್ನು ಬ್ರಾ ಒಳಗೆ ಧರಿಸಬೇಕು.

ಕೂದಲು ಬಿಡಿ: ನಿಮಗೆ ನಿಪ್ಪಲ್ ಏರಿಯಾ ಹಾರ್ಡ್ ಎನಿಸಿ, ನಿಮ್ಮ ಬಳಿ ಸ್ಕಾರ್ಫ್ ಕೂಡ ಇಲ್ಲದಿದ್ದರೆ ಕೂದಲು ಬಿಡಿ. ಕೂದಲಲ್ಲಿ ನಿಮ್ಮ ಬ್ರೆಸ್ಟ್ ಏರಿಯಾ ಕವರ್ ಮಾಡಿದರೆ ಮುಗಿದೇ ಹೋಯ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss