ಮನೆಯಲ್ಲಿ ಅದೆಷ್ಟು ಚಾರ್ಜರ್ ಇದೆಯೋ ಲೆಕ್ಕವೇ ಇಲ್ಲ. ಒಂದಿಲ್ಲಾ ಒಂದು ಕಾರಣದಿಂದ ಚಾರ್ಜರ್ ಬೇಗ ಹಾಳಾಗಿ ಹೋಗುತ್ತದೆ. ಒಂದು ಬಾರಿ ಒರಿಜಿನಲ್ ಚಾರ್ಜರ್ ಹಾಳಾದಮೇಲೆ ಎಷ್ಟೇ ಚಾರ್ಜರ್ ಕೊಂಡರೂ ಅದರಷ್ಟು ಚೆನ್ನಾಗಿ ಇರೋದಿಲ್ಲ. ಚಾರ್ಜರ್ ಅಷ್ಟು ಬೇಗ ಹಾಳಾಗೋದ್ಯಾಕೆ? ನೀವು ಈ ತಪ್ಪುಗಳನ್ನು ಮಾಡ್ತಿರಬಹುದು…
- ಪ್ಲಗ್ನಿಂದ ಚಾರ್ಜರ್ ತೆಗೆಯೋವಾಗ ಚಾರ್ಜರ್ ವೈರ್ ಹಿಡಿದು ಎಳೆಯಬೇಡಿ.
- ಚಾರ್ಜರ್ಗೆ ನಾರ್ಮಲ್ ವಾತಾವರಣ ಬೇಕು. ತುಂಬಾ ತಣ್ಣಗಿನ ಅಥವಾ ತುಂಬಾ ಬಿಸಿ ವಾತಾವರಣದಲ್ಲಿ ಇಟ್ಟರೆ ಚಾರ್ಜರ್ ಬೇಗ ಹಾಳಾಗುತ್ತದೆ.
- ನೀರಿನಿಂದ ಚಾರ್ಜರ್ ದೂರ ಇಡಿ. ಗ್ಯಾಡ್ಜೆಟ್ಸ್ ಇರುವ ಟೇಬಲ್ ಮೇಲೆ ನೀರಿನ ಲೋಟ ಇಡಬೇಡಿ.
- ಯಾವುದೋ ಫೋನಿನ ಚಾರ್ಜರ್ ನಿಮ್ಮ ಫೋನ್ಗೆ ಹಾಕಬೇಡಿ. ನಿಮ್ಮ ಚಾರ್ಜರ್ ಬೇರೆ ಫೋನ್ಗೆ ಹಾಕಬೇಡಿ.
- ಚಾರ್ಜರ್ ವೈರ್ಗಳನ್ನು ಗಂಟುಹಾಕಬೇಡಿ. ಸುತ್ತಿ ನೀಟಾಗಿ ಎತ್ತಿಡಿ.
- ಪದೆ ಪದೆ ಚಾರ್ಜರ್ ಬೀಳಿಸಬೇಡಿ. ಇದರಿಂದಲೂ ಚಾರ್ಜರ್ ಹಾಳಾಗುತ್ತದೆ.