ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರೆಗ್ನೆನ್ಸಿ ತೂಕ ಇಳಿಸಬೇಕಾ? ದೇಹದ ತೂಕ ಇಳಿಸೋಕೆ ಇಲ್ಲಿದೆ ರಿಯಲ್ ಟಿಪ್ಸ್..

ಮಕ್ಕಳಾದ ನಂತರ ಹೆಣ್ಣುಮಕ್ಕಳ ದೇಹ ತುಂಬಾನೇ ಬದಲಾಗುತ್ತದೆ. ಪ್ರೆಗ್ನೆನ್ಸಿ ವೇಳೆಯಲ್ಲಿ ಹೆಚ್ಚಿಸಿಕೊಂಡ ತೂಕ ಇಳಿಯೋದೆ ಇಲ್ಲ. ಇನ್ನು ಮಕ್ಕಳಾದ ನಂತರ ಫೀಡಿಂಗ್ ನಿಲ್ಲಿಸುವವರೆಗೂ ಅಷ್ಟು ಫಿಸಿಕಲ್ ಆಕ್ಟಿವಿಟಿ ಮಾಡೋದಕ್ಕೆ ಆಗುವುದಿಲ್ಲ. ಆದರೆ ತೂಕ ಇಳಿಸೋದು ತುಂಬಾನೆ ಮುಖ್ಯ ಹೇಗೆ ಇಳಿಸೋದು ತೂಕ.. ಈ ಟಿಪ್ಸ್ ಫಾಲೋ ಮಾಡಿ..

  • ರಿಯಲ್ ಆದ ಗೋಲ್ಸ್ ಇಟ್ಟುಕೊಳ್ಳಿ. ಒಂದೇ ತಿಂಗಳಿನಲ್ಲಿ 20 ಕೆ.ಜಿ ಇಳಿಸುತ್ತೇನೆ ಅನ್ನೋದೆಲ್ಲ ಸಾಧ್ಯವಲ್ಲ. ಆದರೆ ತಿನ್ನುವುದದು, ಕೂರುವುದು, ಸ್ವಲ್ಪ ವರ್ಕ್‌ಔಟ್ ಹೀಗೆ ಮ್ಯಾನೇಜ್ ಮಾಡಿ.
  • ಕ್ರಾಶ್ ಡಯಟ್ ಬೇಡ. ಇದರಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ತೂಕ ಇಳಿಯುವ ಬಗ್ಗೆ ಮಾಹಿತಿ ಇದೆ. ಆದರೆ ಮಗುವಿಗೆ ನ್ಯೂಟ್ರಿಯಂಟ್ಸ್ ಬೇಕು. ಫೀಡಿಂಗ್ ಮಾಡುವವರು ಒಳ್ಳೆಯ ಆಹಾರ ಸೇವಿಸಿ.
  • ಬ್ರೆಸ್ಟ್‌ಫೀಡ್ ಮಾಡಿ. ಆದಷ್ಟು ಎಷ್ಟು ಸಮಯ ಆಗುತ್ತದೋ ಅಷ್ಟು ಸಮಯ ಬ್ರೆಸ್ಟ್‌ಫೀಡ್ ಮಾಡಿ. ಇದರಿಂದ ಮಗುವಿಗೂ ನಿಮ್ಮ ತೂಕಕ್ಕೂ ಒಳ್ಳೆಯ ರಿಸಲ್ಟ್ ಸಿಗುತ್ತದೆ.
  • ಎಷ್ಟು ಕ್ಯಾಲೋರಿ ತಿನ್ನುತ್ತೀರಿ ಎನ್ನುವುದರ ಮೇಲೆ ಗಮನ ಇರಲಿ. ಆದಷ್ಟು ಜಂಕ್ ತಿನ್ನದಿರಿ. ಫುಡ್ ಡೈರಿ ಇಟ್ಟುಕೊಂಡು ಕ್ಯಾಲೊರಿ ಲೆಕ್ಕ ಮಾಡಿ.
  • ಹೈ ಫೈಬರ್ ಇರುವ ಆಹಾರ ಹೆಚ್ಚು ತಿನ್ನಿ. ಇದು ತೂಕ ಇಳಿಕೆಗೆ ಸಹಕಾರಿ. ಅಲ್ಲದೇ ಮಲಬದ್ಧತೆಯಂಥ ಸಮಸ್ಯೆಯಿಂದ ನಿಮ್ಮನ್ನು ದೂರ ಇರುವಂತೆ ಮಾಡುತ್ತದೆ.
  • ಹೆಲ್ತಿಯಾದ ಸ್ನಾಕ್ಸ್ ತಿನ್ನಿ. ಆದಷ್ಟು ಹೊರಗಿನ ಆಹಾರ ಅವಾಯ್ಡ್ ಮಾಡಿ. ಇದು ನಿಮ್ಮನ್ನು ಕರಗಿಸಲಾರದಷ್ಟು ತೂಕ ಮಾಡಿಬಿಡುತ್ತದೆ.
  • ಸಕ್ಕರೆ,ಸಕ್ಕರೆ ಡ್ರಿಂಕ್ಸ್‌ಗಳನ್ನು ಅವಾಯ್ಡ್ ಮಾಡಿ. ಇದು ನಿಮ್ಮ ಕ್ಯಾಲೋರಿ ಇನ್‌ಟೇಕ್ ಡಬಲ್ ಮಾಡುತ್ತದೆ. ಆದಷ್ಟು ಪ್ಯಾಕ್ ಆಗಿರುವ ಫ್ರೂಟ್ ಜ್ಯೂಸ್,ಶುಗರಿ ಡ್ರಿಂಕ್ಸ್ ಅವಾಯ್ಡ್ ಮಾಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss