ಹೇಗೆ ಮಾಡೋದು?
ಮೊದಲು ಬಾಣಲೆಗೆ ಬೆಣ್ಣೆ ಹಾಗೂ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ಖಾರದಪುಡಿ ಹಾಕಿ, ಉಪ್ಪು ಹಾಕಿ ಬಾಡಿಸಿ
ನಂತರ ಮ್ಯಾಗಿ ಮಸಾಲಾ ಹಾಕಿ
ನಂತರ ಇದಕ್ಕೆ ನೀರಿನಲ್ಲಿ ಬೇಯಿಸಿದ ಪಾಸ್ತಾ ಹಾಕಿ
ಅದನ್ನು ಒಂದು ಬೌಲ್‌ಗೆ ಹಾಕಿ, ನಂತರ ಅದೇ ಪ್ಯಾನ್‌ಗೆ ಒಂದು ಸ್ಪೂನ್ ಮೈದಾ ಹಾಗೂ ಬೆಣ್ಣೆ ಹಾಕಿ ಗಂಟು ಬಾರದಂತೆ ಬಾಡಿಸಿ
ನಂತರ ಹಾಲು ಹಾಕಿ ಗಂಟಾಗದಂತೆ ಮಿಕ್ಸ್ ಮಾಡಿ
ಇದಕ್ಕೆ ಚೀಸ್ ಹಾಕಿ ಮಿಕ್ಸ್ ಮಾಡಿ
ನಂತರ ಆಗಲೇ ಮಾಡಿಟ್ಟ ಪಾಸ್ತಾ ಹಾಕಿ ಮಿಕ್ಸ್ ಮಾಡಿದ್ರೆ ಟೇಸ್ಟಿ ಪಾಸ್ತಾ ರೆಡಿ