Sunday, August 14, 2022

Latest Posts

ಬಾಳೆ ದಿಂಡಿನ ಜ್ಯೂಸ್ ತಯಾರಿಸುವುದು ಹೇಗೆ? ನಿತ್ಯ ಇದನ್ನು ಸೇವಿಸಿದರೆ ಈ ರೋಗಗಳು ನಿಮ್ಮ ಬಳಿ ಸುಳಿಯುವುದೂ ಇಲ್ಲ…

ಬಾಳೆ ಮರದ ಪ್ರತಿ ಭಾಗವೂ ಉಪಯೋಗಕ್ಕೆ ಬರುವಂತದ್ದೆ. ಬಾಳೆ ಕಾಯಿ, ಹೂವು, ಎಲೆ, ಬಾಳೆಹಣ್ಣು, ಬಾಳೆ ಎಲೆ, ಬಾಳೆ ದಿಂಡು ಹೀಗೆ ಪ್ರತಿಯೊಂದು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅದರಲ್ಲಿ ಬಾಳೆ ದಿಂಡು ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದರ ಜ್ಯೂಸ್ ಮಾಡಿಕೊಂಡು ಸೇವಿಸಬೇಕು.

ಬಾಳೆ ದಿಂಡಿನ ಜ್ಯೂಸ್ ಹೀಗೆ ಮಾಡಿ...

ಬೇಕಾಗುವ ಸಾಮಗ್ರಿ…

ಬಾಳೆ ದಿಂಡು
ಬೆಲ್ಲ
ಏಲಕ್ಕಿ ಪುಡಿ
ನೀರು

ಮಾಡುವ ವಿಧಾನ:

  • ಬಾಳೆ ದಿಂಡನ್ನು  ಕಾಲು ಕೆ.ಜಿ. ಆಗುವಷ್ಟು ತೆಗೆದುಕೊಳ್ಳಿ.
  • ಅದನ್ನು ಚಿಕ್ಕ ಚಿಕ್ಕ ಪೀಸ್ ಮಾಡಿಕೊಳ್ಳಿ. ನಂತರ ನೀರಿನೊಂದಿಗೆ ಅದನ್ನು ರುಬ್ಬಿಕೊಳ್ಳಿ.
  • ನಂತರ ಅದನ್ನು ಚೆನ್ನಾಗಿ ಸೋಸಿಕೊಳ್ಳಿ. ಆನಂತರ ಅದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಕಿದರೆ ಬಾಳೆ ದಿಂಡಿನ ಜ್ಯೂಸ್ ರೆಡಿ.

ಇದರ ಉಪಯೋಗ…

  • ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.
  • ಮೂತ್ರ ಕೋಶದಲ್ಲಿ ಕಲ್ಲು ಬೆಳೆಯದಂತೆ ತಡೆಯುತ್ತದೆ.
  • ಕಿಡ್ನಿ ಸ್ಟೋನ್ ಸಮಸ್ಯೆ ಎದುರಿಸುತ್ತಿರುವವರೂ ಕೂಡ ಈ ಜ್ಯೂಸ್ ಸೇವಿಸಿದರೆ ಸ್ಟೋನ್ ನಿವಾರಣೆಯಾಗುತ್ತದೆ.
  • ಮಧುಮೇಹಿಗಳು ದಿನವೂ ಈ ಜ್ಯೂಸ್ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
  • ಬಾಳೆದಿಂಡಿನ ಜ್ಯೂಸ್ ನಲ್ಲಿ ಪೊಟ್ಯಾಶಿಯಂ ಪ್ರಮಾಣ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.
  • ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
  • ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss