ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೀಟ್ರೂಟ್ ಜ್ಯೂಸ್ ತಯಾರಿಸುವುದು ಹೇಗೆ? ಪ್ರತಿದಿನ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಏನೆಲ್ಲ ಲಾಭ? ಇಲ್ಲಿದೆ ನೋಡಿ…

ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ಹಣ್ಣು, ಹಸಿ ತರಕಾರಿ, ಅವುಗಳ ಜ್ಯೂಸ್ ನಮ್ಮ ಆರೋಗ್ಯಕ್ಕೆ ತುಂಬಾನೇ ಉಪಯೋಗಕಾರಿ. ಫ್ರಿಡ್ಜ್ ಲ್ಲಿ ತಿಂಗಳಿಂದ ಇಟ್ಟಿರುವ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಕೋಲ್ಡ್ ಡ್ರಿಂಕ್ಸ್ ಗಳನ್ನು ಕುಡಿಯುವ ಬದಲು ಪ್ರತಿದಿನ ಅರ್ಥ ಕಪ್ ಬೀಟ್ರೂಟ್ ಜ್ಯೂಸ್ ಸೇವಿಸಿ. ಇದರಲ್ಲಿ ಇರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಸಿ,ಎ ನಮ್ಮನ್ನು ಆರೋಗ್ಯವಾಗಿಡುತ್ತದೆ.

ಹೇಗೆ ಬಿಟ್ರೂಟ್ ಜ್ಯೂಸ್ ತಯಾರಿಸುವುದು?

ಬೇಕಾಗುವ ಸಾಮಗ್ರಿ:

ಬೀಟ್ರೂಟ್
ನೀರು
ಉಪ್ಪು

ಮಾಡುವ ವಿಧಾನ:

  • ಮೊದಲಿಗೆ ಚಿಕ್ಕ ಬೀಟ್ರೂಟ್ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
  • ನಂತರ ಅದನ್ನು ಸ್ವಲ್ಪ ನೀರಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
  • ಆನಂತರ ಸೋಸಿಕೊಂಡು ಅರ್ಧ ಕಪ್ ಕುಡಿಯಿರಿ. ಬೇಕಿದ್ದಲ್ಲಿ ಚಿಟಿಕೆ ಉಪ್ಪು ಮಿಕ್ಸ್ ಮಾಡಿಕೊಳ್ಳಿ.

ಪ್ರತಿದಿನ ಬೆಳಗ್ಗೆ ಈ ಜ್ಯೂಸ್ ಸೇವಿಸಿದರೆ ಏನೆಲ್ಲ ಲಾಭವಿದೆ ನೋಡಿ…

  • ಯಕೃತ್ತನ್ನು ಶುದ್ಧಗೊಳಿಸುತ್ತದೆ.
  • ಮೂಳೆಗಳು ಸದೃಢಗೊಳ್ಳಲು ಸಹಕಾರಿ.
  • ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
  • ಗರ್ಭಿಣಿಯರು ಬೀಟ್ರೂಟ್ ಜ್ಯೂಸ್ ಸೇವಿಸಿದರೆ ಪೋಲಿಕ್ ಆಮ್ಲ ಸಿಗುತ್ತದೆ.
  • ರಕ್ತ ಕಡಿಮೆ ಇರುವವರು ತಪ್ಪದೇ ಈ ಜ್ಯೂಸ್ ಸೇವಿಸಿ. ರಕ್ತದಲ್ಲಿ ನೈಟ್ರೇಟ್ ಹೆಚ್ಚಾಗುವಂತೆ ಮಾಡುತ್ತದೆ.
  • ಬೀಟ್ರೂಟ್ ಅಧಿಕ ರಕ್ತದೊತ್ತಡ ಮತ್ತು ಹೃದಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
  • ಬೀಟ್ರೂಟ್ ನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಸಿ,ಎ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss