Tuesday, June 28, 2022

Latest Posts

ಸಾಂಪ್ರದಾಯಕ ಶೈಲಿಯ ಮೊಟ್ಟೆ ಸಾರು ಮಾಡೋದು ಹೀಗೆ.. ಇದರ ರುಚಿಗೆ ಸಾಟಿಯೇ ಇಲ್ಲ!

ಮೊಟ್ಟೆ ಸಾಂಬಾರ್ ಯಾರಗಿಷ್ಟ ಇಲ್ಲ ಹೇಳಿ? ಮಧ್ಯಾಹ್ನದ ಹೊತ್ತು ಬಿಸಿ ಮೊಟ್ಟೆ ಸಾರು, ಅನ್ನ, ಮುದ್ದೆ ತಿಂದರೆ ಸ್ವರ್ಗಕ್ಕೆ ಸಮ ಅನ್ನಬಹುದು. ಮನೆಯಲ್ಲಿ ಈ ರೀತಿ ಮೊಟ್ಟೆ ಸಾರು ಮಾಡಿ ತಿಂದು ನೋಡಿ..

ಸಾಮಾಗ್ರಿಗಳು

ಮೊಟ್ಟೆ
ಈರುಳ್ಳಿ
ಬೆಳ್ಳುಳ್ಳಿ
ಟೊಮ್ಯಾಟೊ
ಶುಂಠಿ
ಚಕ್ಕೆ
ಲವಂಗ
ಕೊತ್ತಂಬರಿ
ಕಾಯಿ
ಸಾಂಬಾರ್ ಪುಡಿ
ಖಾರದಪುಡಿ

ಮಾಡುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ ಹಾಕಿ ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹುರಿದುಕೊಳ್ಳಿ
ನಂತರ ಮಿಕ್ಸಿಗೆ ಈ ಮಿಶ್ರಣ ಹಾಕಿ, ಕಾಯಿ, ಕೊತ್ತಂಬರಿ ಹಾಕಿ ರುಬ್ಬಿ.
ನಂತರ ಪಾತ್ರೆಗೆ ಎಣ್ಣೆ ಹಾಕಿ ರುಬ್ಬಿದ ಈ ಮಿಶ್ರಣ ಹಾಕಿ.
ನಂತರ ಇದಕ್ಕೆ ನೀರು ಹಾಕಿ, ಉಪ್ಪು ಹಾಕಿ ಬೇಕಾದ ಹದಕ್ಕೆ ತನ್ನಿ.
ನಂತರ ಉಪ್ಪು, ಖಾರ ರುಚಿ ನೋಡಿ ಮೊಟ್ಟೆ ಹೊಡೆಯಿರಿ.
ಇದಾದ ಮೂರು ನಿಮಿಷ ಸಾಂಬಾರ್ ಸಣ್ಣ ಉರಿ ಮಾಡಿ ಬಿಟ್ಟುಬಿಡಿ.
ನಂತರ ಮೊಟ್ಟೆ ತಳ ಒತ್ತದಂತೆ ಒಮ್ಮೆ ತಿರುಗಿಸಿ.
ನಂತರ ೧೦ ನಿಮಿಷ ಕುದಿಸಿದರೆ ಮೊಟ್ಟೆ ಸಾರು ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss