ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಪೂರ್ತಿ ಮಕ್ಕಳು ನೀರು ಕುಡಿಯೋದೇ ಇಲ್ವಾ? ಹಾಗಿದ್ದರೆ ಇನ್ನು ಮುಂದೆ ಈ ರೀತಿ ಮಾಡಿ

ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಪೋಷಕರ ಸಮಸ್ಯೆಯೇ ಅವರು ನೀರು ಕುಡಿತಾರಾ? ಇಲ್ವಾ? ಅನ್ನೋದು. ಬೆಳಗ್ಗೆ ಕಳುಹಿಸಿ ಕೊಟ್ಟ ಬಾಟಲಿ ತುಂಬಿದ ನೀರನ್ನು ಸಂಜೆ ಹಾಗೇ ವಾಪಾಸ್ ತರುತ್ತಿದ್ದರು.. ಈಗಲೂ ಹಾಗೆ ಇದೆ ಪರಿಸ್ಥಿತಿ, ಆದರೆ ಶಾಲೆಗೆ ಹೋಗೋದಿಲ್ಲ ಅಷ್ಟೆ.. ದಿನಪೂರ್ತಿ ಆಡಿದರೂ ನೀರು ಬೇಕು ಅನ್ನೋದಿಲ್ಲ, ಊಟದ ಸಮಯದಲ್ಲಿ ನೀರು ಬೇಡ ಅನ್ನೋದು ಇದೆಲ್ಲಾ ಮಾಮೂಲಿಯಾಗಿದೆ. ಇನ್ನು ಮುಂದೆ ಮಕ್ಕಳಿಗೆ ನೀರು ಕುಡಿಸಲು ಈ ಟ್ರಿಕ್ ಟ್ರೈ ಮಾಡಿ..

ಬಣ್ಣ ಬಣ್ಣದ ಕಪ್, ಬಾಟಲಿಗಳು:
ಮಕ್ಕಳಿಗೆ ತಮ್ಮಿಷ್ಟದ ಬಣ್ಣಗಳ ಕಪ್, ಬಾಟಲಿಗಳನ್ನು ಖರೀದಿಸಿ, ಪ್ರತಿದಿನ ಅದರಲ್ಲಿ ನೀರು ಕುಡಿಯುವಂತೆ ಹೇಳಿ. ಬಾಟಲಿಗಳ ಮೇಲಿನ ಆಸೆಗಾದರೂ ಹೆಚ್ಚು ನೀರು ಕುಡಿತಾರೆ.

Testing Kids' Water Bottles | Cook's Illustrated

ಐಸ್ ಕ್ಯೂಬ್:
ಮಕ್ಕಳು ನೀರು ಕುಡಿಯುವುದಿಲ್ಲ ಎಂದರೆ ಅದಕ್ಕೆ ವಿಭಿನ್ನ ಆಕಾರಗಳನ್ನು ಕೊಟ್ಟು ಅದನ್ನು ಐಸ್ ಕ್ಯೂಬ್ ಮಾಡಿ ಕೊಡಿ. ಇದರಿಂದಲೂ ಮಕ್ಕಳು ಹೆಚ್ಚು ನೀರು ಸೇವಿಸಿದಂತಾಗುತ್ತದೆ.

Ice Cube Discovery Activity for Kids

ಹಣ್ಣು:
ನೀವು ಸಿದ್ಧಗೊಳಿಸುವ ಐಸ್ ಕ್ಯೂಬ್ ನ ಒಳಗೆ ಸ್ಟ್ರಾಬೆರಿ, ನಿಂಬು, ಸೌತೆಕಾಯಿ, ರಾಸ್ಬೆರಿ ಅಂತಹ ಹಣ್ಣುಗಳನ್ನು ಇಡಿ. ಮಕ್ಕಳಿಗೆ ಇದು ಆಕರ್ಷಕವಾಗಿ ಕಾಣುತ್ತದೆ.

5 Ways To Trick The Kids Into Drinking More Water This Summer | RESCU

ಸ್ಟ್ರಾ:
ಮಕ್ಕಳಿಗೆ ಲೋಟದಲ್ಲಿ ಕುಡಿಯೋಕೆ ಇಷ್ಟ ಆಗೋದಿಲ್ಲ. ಹಾಗಾಗಿ ಅವರಿಗೆ ಒಂದು ಸ್ಟ್ರಾ, ಪೈಪ್ ಕೊಡಿ. ಇದು ಮಕ್ಕಳಿಗೆ ಸಖತ್ ಖುಷಿ ಕೊಡುವುದರ ಜೊತೆಗೆ ಜಾಸ್ತಿ ನೀರು ಕುಡಿತಾರೆ.

7 Healthy Drinks for Kids (And 3 Unhealthy Ones)

ನೀವು ಕುಡಿಯಿರಿ:
ಮಕ್ಕಳ ಎದುರು ನೀವು ಹೆಚ್ಚು ನೀರು ಕುಡಿಯಿರಿ, ಇದು ಮಕ್ಕಳನ್ನು ಹುರಿದುಂಬಿಸುತ್ತದೆ.

7 Facts That Nobody Told You About Water Filters - Royal Green Su Arıtma  Cihazı

ಅವಾರ್ಡ್ ಕೊಡಿ:
ನಿಮ್ಮ ಮಗು ಪ್ರತಿ ದಿನ ಹೆಚ್ಚು ನೀರು ಕುಡಿಯುತ್ತಿದ್ದಾರೆ ಎಂದೆನಿಸಿದರೆ ಅವರಿಗೊಂದು ಪುಟ್ಟ ಅವಾರ್ಡ್ ಕೊಡಿ. ಅಂದರೆ ಅವರಿಷ್ಟದ ಅಡುಗೆ, ಒಂದು ಬ್ಯಾಡ್ಜ್.. ಹೀಗೆ ಮಾಡೋದ್ರಿಂದಲೂ ಮಕ್ಕಳು ಹೆಚ್ಚು ನೀತು ಕಡಿಯೋಕೆ ಪ್ರೇರೇಪಿಸಿದಂತಾಗುತ್ತದೆ.

Health tips: Why you should drink more water during summers | Lifestyle  News,The Indian Express

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss