MUST READ | ಈಗಿನ ಹುಡಗರಿಗ್ಯಾಕೆ ಇದು ಗೊತ್ತಿಲ್ಲ? ಹೆಂಡತಿ ಖುಷಿಗೆ ಸಾಹಸ ಮಾಡಬೇಕಿಲ್ಲ, ಇಷ್ಟು ಮಾಡಿ ಸಾಕು..

ಏನಾದ್ರು ಮಾಡ್ಬೋದು, ಆದ್ರೆ ಹೆಂಡತಿಯನ್ನು ಖುಷಿಯಾಗಿಡೋದೆ ಕಷ್ಟದ ಕೆಲಸ. ಅವರಿಗಾಗಿ ದುಡೀತಿವಿ, ದುಡ್ಡು ಬೇಡ ನಿಮ್ಮ ಸಮಯ ಬೇಕು ಅಂತಾರೆ, ದುಡ್ಡಿನ ಹಿಂದೆ ಹೋಗದೆ ಸಮಯ ಕೊಟ್ರೆ, ದುಡ್ಡೇ ಇಲ್ಲದೆ ಎಲ್ಲಿಗೆ ಹೋಗೋದು? ಏನು ಮಾಡೋದು ಅಂತಾರೆ! ಹೆಂಡತಿಯನ್ನು ಖುಷಿಯಾಗಿಡೋದು ಹೇಗೆ ಇಲ್ಲಿದೆ ಮಾಹಿತಿ..

  • ಅವ್ಳು ಹೇಳೋದು ಕೇಳಿ ಸಾಕು! ಹೌದು, ಅವಳು ಮಾತಾಡೋದನ್ನು ಕೇಳಿಸಿಕೊಳ್ಳಿ, ನಿಮ್ಮ ಸಜೆಶನ್ ಬೇಡ ಬರೀ ಮಾತು ಕೇಳಿಸಿಕೊಳ್ಳಿ ಸಾಕು!
  • ಅವಳನ್ನು ಮುದ್ದು ಮಾಡೋದು ನಿಲ್ಲಿಸಬೇಡಿ, ಮದುವೆಯಾಗಿ ವರ್ಷಗಳಾಯ್ತು ಈಗ್ಯಾರು ಹಗ್ ಮಾಡ್ತಾರೆ, ಮುದ್ದು ಮಾಡ್ತಾರೆ ಅನ್ನೋ ನಿರ್ಲಕ್ಷ್ಯ ಬೇಡ, ಯಾವಾಗಲೂ ಅವಳನ್ನು ಮುದ್ದು ಮಾಡಿ.
  • ಅವಳಿಗೆ ಏನು ಬೇಕು? ಇದು ನಿಮಗೆ ಗೊತ್ತಿರಲಿ. ಯಾವುದೇ ನಿರ್ಧಾರದ ವಿಷಯದಲ್ಲಿಯೂ ಅವಳಿಗೆ ಏನಿಷ್ಟ ಅನ್ನೋದು ನೆನಪಿರಲಿ.
  • ಆಗಾಗ ಹೊಗಳಿ ಸ್ವಾಮಿ! ಹೌದು, ಅವಳು ಹೈ ಬ್ರೋ ಮಾಡಿಸಿಕೊಂಡು ಬಂದಾಗ ನಿಮಗೆ ಏನೂ ವ್ಯತ್ಯಾಸ ಕಾಣದೇ ಇರಬಹುದು, ಆದರೂ ಹೇಳಿ ಚೆನ್ನಾಗಿದೆ ಅಂತ, ಒಂದು ಮಾತು ಅವಳ ಮುಖದಲ್ಲಿ ನಗು ತರಿಸೋದಾದ್ರೆ ಯಾಕೆ ಮಾಡಬಾರದು?
  • ನಂಬಿಕೆ ಇಡಿ, ಇದು ಭಾರೀ ಮುಖ್ಯ, ಅವಳು 10 ಗಂಟೆಗೆ ಮನೆಗೆ ಬಂದರೂ ನಂಬಿಕೆ ಇರಲಿ. ಗೆಳೆಯರ ಜೊತೆ ಸಮಯ ಕಳೆದರೂ ಆಕೆಯನ್ನು ನಂಬಿ.
  • ಆಗಾಗ ರೊಮ್ಯಾಂಟಿಕ್ ಡೇಟ್ಸ್ ಹಾಗೂ ಲಾಂಗ್ ಡ್ರೈವ್ ಮಿಸ್ ಮಾಡಬೇಡಿ, ಆಕೆಯ ಹುಟ್ಟುಹಬ್ಬ, ಆನಿವರ್ಸರಿ ಮರೆಯಬೇಡಿ.
  • ಅವಳ ತವರು ಮನೆಯನ್ನು ಗೌರವಿಸಿ, ಮನೆಯವರನ್ನು ಪ್ರೀತಿಸಿ. ತವರು ಮನೆ ಖುಷಿಯಾಗಿದ್ರೆ ನಿಮ್ಮ ಮನೆಯೂ ಖುಷಿಯಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!