ಕಾಯಿ ಚಟ್ನಿ, ಕಡ್ಲೆ ಚಟ್ಟಿ ಯಾವಾಗಲೂ ಎವರ್ಗ್ರೀನ್. ಆದರೂ ಕೆಲವೊಮ್ಮೆ ಒಂದನ್ನೇ ತಿಂದು ಬೋರ್ ಆಗಿದ್ದರೆ ಶೇಂಗಾ ಚಟ್ನಿ ಟ್ರೈ ಮಾಡಿ. ಇದರ ರುಚಿ ಕಡ್ಲೆ ಚಟ್ನಿಗಿಂತಲೂ ಚೆನ್ನಾಗಿ ಇರುತ್ತದೆ. ಹಾಗೆ ಚಟ್ನಿ ಒಂದಿದ್ದರೆ ಚಿಂತೆ ಇಲ್ಲದೆ ಅದಕ್ಕೆ ಅನ್ನ, ಚಪಾತಿ ಅಥವಾ ದೋಸೆ ತಿನ್ನಬಹುದು. ಶೇಂಗಾ ಚಟ್ನಿ ಮಾಡೋದು ಹೇಗೆ ನೋಡಿ..
ಮಾಡುವ ವಿಧಾನ
ಮೊದಲು ಹೆಂಚಿನ ಮೇಲೆ ಶೇಂಗಾ ಹುರಿದುಕೊಳ್ಳಿ.
ನಂತರ ಮಿಕ್ಸಿಗೆ ಹಾಕಿ, ತಣ್ಣಗಾಗಲು ಬಿಡಿ.
ನಂತರ ಅದಕ್ಕೆ ಸ್ವಲ್ಪ ಕಾಯಿ ಹಾಕಿ.
ನಂತರ ಬೆಳ್ಳುಳ್ಳಿ ಹಾಗೂ ಮೆಣಸಿನಕಾಯಿ ಹಾಕಿ.
ನಂತರ ಮಿಕ್ಸಿ ಮಾಡಿ, ಒಂದು ರೌಂಡ್ ಆದ ನಂತರ ಉಪ್ಪು ಹಾಗೂ ಕೊತ್ತಂಬರಿ ಹಾಕಿದರೆ ಶೇಂಗಾ ಚಟ್ನಿ ರೆಡಿ.