ಮೊಬೈಲ್ ನಲ್ಲಿ ವಾಟ್ಸ್ ಆಪ್ ಕಾಲ್ ಮಾಡ್ಬೋದು ಅಂತ ಎಲ್ಲರಿಗೂ ಗೊತ್ತಿದೆ ಆದರೆ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ನಲ್ಲಿ ಮಾಡುವುದರ ಬಗ್ಗೆ ಗೊತ್ತಿದ್ಯಾ? ಹಾಗಿದ್ದರೆ ಹೇಗೆ ಕಾಲ್ ಮಾಡೋದು ನೋಡಿ.. ಇಲ್ಲಿದೆ ಸಿಂಪಲ್ ಸ್ಟೆಪ್ಸ್
- ಮೊದಲಿಗೆ ನಿಮ್ಮ ಲ್ಯಾಪ್ ಟಾಪ್ ನಲ್ಲಿ ವಾಟ್ಸ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
- ನಂತರ ಅದನ್ನು ನಿಮ್ಮ ಸಿಸ್ಟಮ್ ನಲ್ಲಿ ಸೆಟ್ ಅಪ್ ಮಾಡಿಕೊಳ್ಳಿ.
- ಬಳಿಕ ಇದು ನಿಮ್ಮ ಲ್ಯಾಪ್ ಟಾಪ್’ನ ಡೆಸ್ಕ್ ಟಾಪ್ ಮೇಲೆ ಇರುತ್ತದೆ.
- ಅದನ್ನು ಕ್ಲಿಕ್ ಮಾಡಿದ ಬಳಿಕ ನೀವು ನಿಮ್ಮ ವಾಟ್ಸ್ ಆಪ್ ಮೊಬೈಲ್ ನಿಂದ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ.
- ಬಳಿಕ ನೀವು ಕರೆ ಮಾಡಬೇಕಿರುವ ಕಾಂಟ್ಯಾಂಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ಬಲ ಭಾಗದಲ್ಲಿ ವಿಡಿಯೋ, ಆಡಿಯೋ ಕಾಲ್ ಆಯ್ಕೆ ಕಾಣಲಿದ್ದು, ನೀವು ನೆಮ್ಮದಿಯಾಗಿ ಕಾಲ್ ಮಾಡಬಹುದು.
- Advertisement -