spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೂದಕುಂಬಳ ಜ್ಯೂಸ್‌ ಮಾಡೋದು ಹೇಗೆ? ಇದರಿಂದ ಏನೆಲ್ಲ ಲಾಭವಿದೆ ಗೊತ್ತಾ?

- Advertisement -Nitte

ಬೂದುಕುಂಬ ಆರೋಗ್ಯದ ದೃಷ್ಟಿಯಿಂದ ತುಂಬನೇ ಒಳ್ಳೆಯದು. ಪ್ರತಿ ದಿನ ಇದರ ಜ್ಯೂಸ್‌ ಸೇವಿಸಿದರೆ ಖಂಡಿತ ನಿಮ್ಮ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ.  ಬೂದುಗುಂಬಳದಲ್ಲಿ ಕಲ್ಲಂಗಡಿಯಂತೆಯೇ ನೀರಿನ ಅಂಶ ಸಮೃದ್ಧವಾಗಿದೆ. ಇದು ಶೇಕಡಾ 96 ರಷ್ಟು ನೀರನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚಿನ ಪ್ರಮಾಣದ ಕರಗುವ ನಾರಿನಂಶವನ್ನು ಹೊಂದಿದೆ. ತೂಕ ಇಳಿಕೆ ಮಾಡುವವರಿಗೆ ಇದರ ಜ್ಯೂಸ್‌ ಹೇಳಿ ಮಾಡಿಸಿದಂತೆ. ಜ್ಯೂಸ್‌ ತಯಾರಿಸುವುದು ಹೇಗೆ? ಅದರ ಉಪಯೋಗಗಳು ಇಲ್ಲಿದೆ ನೋಡಿ..

ಬೇಕಾಗುವ ಪದಾರ್ಥ:
ಬೂದಕುಂಬಳ ಕಾಯಿ
ಸಕ್ಕರೆ
ಹಾಲು

ಮಾಡುವ ವಿಧಾನ:

  • ಮೊದಲಿಗೆ ಬೂದ ಕುಂಬಳಕಾಯಿಯನ್ನು ನಾಲ್ಕು ಫೀಸ್ ಮಾಡಿಕೊಳ್ಳಿ.
  • ಅದರಲ್ಲಿ ಒಂದು ಫೀಸ್ ಜ್ಯೂಸ್ ಮಾಡಲು ಸಾಕು.
  • ಆ ಒಂದು ಫೀಸ್‌ನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಮಾಡಿಕೊಂಡು ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಆ ನಂತರ ಹಾಲು ಮತ್ತು ಸಕ್ಕರೆ ಹಾಕಿ ಮತ್ತೆ ರುಬ್ಬಿಕೊಳ್ಳಿ.
  • ಬೇಕಾದವರು ಹಾಲನ್ನು ಕೋಲ್ಡ್ ಮಾಡಿಕೊಂಡು ಅದನ್ನು ಜ್ಯೂಸ್‌ಗೆ ಹಾಕಿಕೊಳ್ಳಬಹುದು. ಹೀಗೆ ಮಾಡದರೆ ಕುಂಬಳಕಾಯಿ ಜ್ಯೂಸ್ ರೆಡಿ.

ಬೂದಕುಂಬಳ ಜ್ಯೂಸ್‌ ಉಪಯೋಗ:

  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಹುಣ್ಣು ಕಡಿಮೆಯಾಗುತ್ತದೆ.
  • ತೂಕ ಕಳೆದುಕೊಳ್ಳಲು ನೆರವಾಗುತ್ತದೆ.
  • ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.
  • ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ.
  • ಗಂಟು ನೋವುಗಳನ್ನು ಕಡಿಮೆ ಮಾಡುತ್ತದೆ.
  • ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
  • ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss