Wednesday, June 29, 2022

Latest Posts

ಆನ್ ಲೈನ್ ಕ್ಲಾಸ್ ಬಳಿಕವೂ ನಿಮ್ಮ ಮಕ್ಕಳು ಜಾಸ್ತಿ ಮೊಬೈಲ್ ನೋಡ್ತಾರಾ? ಹಾಗಿದ್ದರೆ ಈ ರೀತಿ ರೂಲ್ಸ್ ಮಾಡಿ

ಮಕ್ಕಳನ್ನು ಎಷ್ಟು ಮೊಬೈಲ್, ಲ್ಯಾಪ್ ಟಾಪ್ ಗಳಿಂದ ದೂರವಿರಲು ಪ್ರಯತ್ನಿಸದರೂ ಅವರ ಈ ಅಭ್ಯಾಸವನ್ನು ನಿಯಂತ್ರಿಸೋದು ಪೋಷಕರಿಗೆ ಕಷ್ಟವಾಗಿದೆ. ಈಗಂತೂ ಆನ್ ಲೈನ್ ಕ್ಲಾಸ್ ನೆಪದಲ್ಲಿ ದಿನವಿಡೀ ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳಿಗೆ ಈ ರೀತಿ ರೂಲ್ಸ್ ಮಾಡಿ…

  • 20-20 ಟೈಮ್ ಬಳಸಿ: 20-20 ಅಂದರೆ ಮಕ್ಕಳು 20 ನಿಮಿಷ ಮೊಬೈಲ್ ನೋಡಬೇಕು ಬಳಿಕ ಮತ್ತೆ 20 ನಿಮಿಷ ಕಡ್ಡಾಯವಾಗಿ ಬ್ರೇಕ್ ತಗೋಬೇಕು.
  • ಮಕ್ಕಳಿಗೆ ಪದೇ ಪದೇ ಕಣ್ಣು ಮಿಟುಕಿಸಲು ನೆನಪಿಸುತ್ತಿರಿ. ಇದರಿಂದ ಕಣ್ಣಿನಲ್ಲಿ ತೇವಾಂಶ ಹೊಂದಿರಲು ಸಹಾಯ ಮಾಡುತ್ತದೆ.
  • ಮಕ್ಕಳಿಗೆ ಸ್ಕ್ರೀನ್ ಅನ್ನು ಎಷ್ಟು ಹತ್ತಿರದಲ್ಲಿ ನೋಡಬೇಕು. ಮೊಬೈಲ್ ನೋಡುವಾಗ ಯಾವ ಭಂಗಿಯಲ್ಲಿರಬೇಕು ಎಂದು ತಿಳಿಸಿ.
  • ನೋಟಿಫಿಕೇಷನ್ ಗಳನ್ನು ಆಫ್ ಮಾಡೋದು ಕಡ್ಡಾಯ.
  • ಮೊಬೈಲ್ ಸ್ಕ್ರೀನ್ ಬ್ರೈಟ್ ನೆಸ್ ಅನ್ನು ಅಡ್ಜಸ್ಟ್ ಮಾಡಿ. ಕೂಲ್ ಗ್ರೇ, ಬ್ಲೂ ಲೈಟ್ ಅಥವಾ ಆಟೋ ಬ್ರೈಟ್ ನೆಸ್ ಬಳಸಿ.
  • ಮೊಬೈಲ್ ನಲ್ಲಿನ ಫಾಂಟ್ ಸೈಸ್ ಗಳನ್ನು ಹೆಚ್ಚಿಸಿ. ಇದರಿಂದ ಮಕ್ಕಳು ಮೊಬೈಲ್ ದೂರದಲ್ಲಿಟ್ಟು ಓದಲು ಅಭ್ಯಾಸ ಮಾಡಬಹುದು.
  • ಮಲಗುವ ಕನಿಷ್ಠ 1 ಗಂಟೆಯ ಮುನ್ನವಾದರೂ ಮೊಬೈಲ್ ಆಫ್ ಮಾಡಬೇಕು.
  • ಆನ್ ಲೈನ್ ಕ್ಯಾಸ್ ಬಳಿಕ ಮೊಬೈಲ್ ನೋಡುವ ಬದಲು ಮಕ್ಕಳು ನಿದ್ದೆ ಮಾಡಬಹುದು. ಇದರಿಂದ ಮಕ್ಕಳ ಕಣ್ಣಿನ ಮೇಲಿನ ಸ್ಟ್ರೈನ್ ಕಡಿಮೆಯಾಗುತ್ತದೆ.
  • ನೆನಪಿಡಿ 2 ವರ್ಷಗಳಿಗಿಂತ ಚಿಕ್ಕ ಮಕ್ಕಳಿಗೆ ಮೊಬೈಲ್ ಅಭ್ಯಾಸ ಬೇಡ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss