spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ನಲ್ಲಿ ಸಿಕ್ಕಾಪಟ್ಟೆ ತಲೆನೋವು ಬರುತ್ತಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

- Advertisement -Nitte

ಹೆಣ್ಣುಮಕ್ಕಳಿಗೆ ಈ ಪೀರಿಯಡ್ಸ್ ವೇಳೆ ಹೆಚ್ಚು ಹೊಟ್ಟೆ ನೋವು, ತಲೆ ನೋವು ಕಾಡೋದು  ಸಾಮಾನ್ಯ. ಆದರೆ ಕೆಲವೊಮ್ಮೆ ವಿಪರೀತ ನೋವಿನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಹೀಗಿರುವಾಗ ಪೀರಿಯಡ್ಸ್ ವೇಳೆ ಬರುವ ತಲೆ ನೋವು ನಿವಾರಣೆಗೆ ಈ ಟಿಪ್ಸ್ ಫಾಲೋ ಮಾಡಿ

ಮೆಗ್ನೀಷಿಯಂ: ಸೊಪ್ಪು, ಗೋಧಿ, ಓಟ್ಸ್, ಹುರಳಿಕಾಯಿ, ಅವಕಾಡೋದಂತಹ ಆಹಾರ ಸೇವಿಸುವುದರಿಂದ ದೇಹದಲ್ಲಿ ಮೆಗ್ನೀಷಿಯಂ ಅಂಶ ಹೆಚ್ಚಾಗಿ ತಲೆ ನೋವು ಕ್ರಮೇಣ ಕಡಿಮೆಯಾಗುತ್ತದೆ.

ಕಾಫಿ: ಕಾಫಿಯಲ್ಲಿನ ಕಫೇನ್ ಅಂಶವು ತಲೆ ನೋವಿಗೆ ರಾಮಬಾಣವಾಗಲಿದೆ. ಆದಷ್ಟು ಹೀಟ್ ಹೆಚ್ಚಿರುವವರು ಕಾಫಿ ಸೇವನೆ ಕಡಿಮೆ ಮಾಡಿದರೆ ಉತ್ತಮ.

ನಿದ್ದೆ: ಕಡಿಮೆ ನಿದ್ದೆ ಅಥವಾ ಜಾಸ್ತಿ ನಿದ್ದೆ ಎರಡೂ ಕೂಡ ತಲೆ ನೋವಿಗೆ ಕಾರಣ. ಹಾಗಾಗಿ ಪ್ರತಿದಿನ ನಿಮ್ಮ ಸ್ಲೀಪ್ ಟೈಮ್ ಅನ್ನು ಸರಿಯಾಗಿ ಹೊಂದಿಸಿಕೊಳ್ಳಿ.

ವಿಟಮಿನ್ಸ್: ಮೊಟ್ಟೆ, ಮಾಂಸ, ಹಾಲು, ಮೊಸರಿನಲ್ಲಿ ಹೆಚ್ಚು ವಿಟಮಿನ್ ಅಂಶಗಳಿದ್ದು, ಇದು ಪೀರಿಯಡ್ಸ್ ನಲ್ಲಿನ ಮೈಗ್ರೇನ್ ಸಮಸ್ಯೆಯನ್ನು ನಿವಾರಿಸುತ್ತದೆ.

ಊಟ: ಯಾವತ್ತೂ ಊಟ, ತಿಂಡಿ ಸ್ಕಿಪ್ ಮಾಡಬೇಡಿ. ಅದರಲ್ಲೂ ಪೀರಿಯಡ್ಸ್ ನ 3-4 ದಿನ ನಿಮ್ಮಿಷ್ಟದ ಆಹಾರಗಳನ್ನು ಸೇವಿಸಿ.

ಒತ್ತಡ: ಪೀರಿಯಡ್ಸ್ ದಿನಗಳಲ್ಲಿ ಅಥವಾ ಹತ್ತಿರದ ದಿನಗಳಲ್ಲಿ ಹೆಚ್ಚು ಸ್ಟ್ರೆಸ್ ಮಾಡಿಕೊಳ್ಳಬೇಡಿ. ಇದರಿಂದ ಮೈಗ್ರೇನ್ ಹೆಚ್ಚಾಗುತ್ತದೆ.

ಕತ್ತಲೆ: ಪೀರಿಯಡ್ಸ್ ನಲ್ಲಿ ತಲೆ ನೋವು ಬಂದರೆ ಆದಷ್ಟು ಕತ್ತಲೆ ಇರುವ ಕೋಣೆಯಲ್ಲೇ ಇರಿ. ಮೊಬೈಲ್, ಲ್ಯಾಪ್ ಟಾಪ್, ಟಿವಿ ನೋಡದಿರಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss