ದೇವಸ್ಥಾನದಲ್ಲಿ ಪ್ರಾಸದದ ರೂಪದಲ್ಲಿ ಕೊಡೋ ಗೊಜ್ಜವಲಕ್ಕಿ ತಿಂತಾ ಇದ್ರೆ ಇನ್ನೂ ತಿನ್ನೋಣ ಎನಿಸುತ್ತದೆ. ರುಚಿರುಚಿಯಾದ ಗೊಜ್ಜವಲಕ್ಕಿ ಮಾಡೋದು ಹೇಗೆ? ಅದಕ್ಕೆ ಏನೆಲ್ಲಾ ಹಾಕ್ತಾರೆ ನೋಡೋಣ ಬನ್ನಿ…
ಬೇಕಾಗಿರುವ ಸಾಮಾಗ್ರಿ
ಅವಲಕ್ಕಿ
ಪುಳಿಯೊಗರೆ ಮಸಾಲಾ
ಉಪ್ಪು
ಶೇಂಗಾ
ಎಣ್ಣೆ
ಒಣಮೆಣಸು
ಹಸಿಮೆಣಸು
ಕರಿಬೇವು
ಕೊಬ್ಬರಿ
ಬೆಲ್ಲ
ಹುಣಸೆಹುಳಿ
ಮಾಡುವ ವಿಧಾನ
ಒಂದು ಬೌಲ್ಗೆ ಹುಣಸೆಹುಳಿ, ಬೆಲ್ಲ, ಪುಳಿಯೊಗರೆ ಮಸಾಲಾ ಹಾಕಿ. ಮಿಕ್ಸ್ ಮಾಡಿ.
ನಂತರ ಅವಲಕ್ಕಿ ಮಿಕ್ಸಿ ಮಾಡಿಕೊಳ್ಳಿ.
ನಂತರ ಅವಲಕ್ಕಿಯನ್ನು ಹುಣಸೆಹುಳಿ ಗೊಜ್ಜಿಗೆ ಮಿಕ್ಸ್ ಮಾಡಿ.
ನಂತರ ಪ್ಯಾನ್ಗೆ ಎಣ್ಣೆ ಶೇಂಗಾ ಹಾಕಿ.
ನಂತರ ಕರಿಬೇವು, ಹಸಿಮೆಣಸು,ಒಣಮೆಣಸು ಹಾಕಿ.
ನಂತರ ಇದಕ್ಕೆ ಮಿಕ್ಸ್ ಮಾಡಿದ ಅವಲಕ್ಕಿ ಹಾಕಿ.
ಮೇಲೆ ಕಾಯಿತುರಿ ಹಾಕಿ ತಿನ್ನಬಹುದು.