Monday, July 4, 2022

Latest Posts

ಮಳೆ ವಾತಾವರಣಕ್ಕೆ ಈರುಳ್ಳಿ ಪಕೋಡಾ ಸಾಥಿ.. ಹೇಗೆ ಮಾಡೋದು ನೋಡಿ..

ಈರುಳ್ಳಿ ಪಕೋಡ ಈ ವಾತಾವರಣದಲ್ಲಿ ತಿನ್ನೋಕೆ ಸಿಕ್ಕಾಪಟ್ಟೆ ಮಜ ಕೊಡುತ್ತದೆ. ಆದರೆ ಗರಿಗರಿಯಾದ ರೆಸಿಪಿ ಮಾಡೋದು ತುಂಬಾನೇ ಈಸಿ.. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು

ಈರುಳ್ಳಿ
ಕಡ್ಲೆಹಿಟ್ಟು
ಹಸಿಮೆಣಸು
ಉಪ್ಪು
ಅಕ್ಕಿಹಿಟ್ಟು
ಗರಂ ಮಸಾಲಾ
ಸಬ್ಬಸಿಗೆ
ಕೊತ್ತಂಬರಿ
ಸೋಡಾ

ಮಾಡುವ ವಿಧಾನ

ಮೊದಲು ಈರುಳ್ಳಿಯನ್ನು ಉದುರಾಗಿ ಹೆಚ್ಚಿಕೊಳ್ಳಿ
ನಂತರ ಪಾತ್ರೆಗೆ ಕಡ್ಲೆಹಿಟ್ಟು,ಅಕ್ಕಿಹಿಟ್ಟು,ಸೋಡಾಪುಡಿ,ಉಪ್ಪು, ಗರಂ ಮಸಾಲಾ ಹಾಕಿ.
ನಂತರ ಈರುಳ್ಳಿ ಹಾಗೂ ಸೊಪ್ಪುಗಳನ್ನು ಹಾಕಿ.
ಈಗ ಹೆಚ್ಚು ನೀರು ಹಾಕದೇ ಉದುರಾಗಿ ಪಕೋಡಾ ಹಿಟ್ಟು ಕಲಸಿ.
ನಂತದ ಕಾದ ಎಣ್ಣೆಗೆ ಇದನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ.
ಬೆಂದ ನಂತರ ದೊಡ್ಡ ಉರಿ ಮಾಡಿ ಬಣ್ಣ ಬರುವಂತೆ ಮಾಡಿದರೆ ಪಕೋಡಾ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss