ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ತಡೆಯುವುದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ಯಾಲ್ಸಿಯಂ ಮಾನವನ ದೇಹಕ್ಕೆ ಬೇಕಾದ ಪ್ರಮುಖ ಪೋಷಕಾಂಶ. ನರಗಳ ಮೂಲಕ ಮೆದುಳಿಗೆ ಸಂದೇಶಗಳನ್ನು ಕಳುಹಿಸುವಂತಹ ದೇಹದ ಪ್ರಮುಖ ಕಾರ್ಯಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಕ್ಯಾಲ್ಸಿಯಂ ಕೊರತೆಯೂ ಒಂದು. ಅದರ ಪ್ರಭಾವ ಮಗುವಿನ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಕ್ಯಾಲ್ಸಿಯಂ ಕೊರತೆಯಿರುವ ಮಕ್ಕಳು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅವರ ಸೂಚನೆಗಳ ಪ್ರಕಾರ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದರ ಜೊತೆಗೆ ನೈಸರ್ಗಿಕವಾಗಿ ಕ್ಯಾಲ್ಸಿಯಂ ಹೆಚ್ಚಿಸುವ ಆಹಾರಗಳನ್ನು ಮಕ್ಕಳಿಗೆ ನೀಡಬೇಕು. ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ಪ್ರತಿದಿನ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಮಕ್ಕಳಿಗೆ ತಿನಿಸಬೇಕು. ಹಾಲಿನ ಉತ್ಪನ್ನಗಳಾದ ಆಗಾಗ್ಗೆ ಮಕ್ಕಳಿಗೆ ನೀಡಬೇಕು.

ಕ್ಯಾಲ್ಸಿಯಂ ಮತ್ತು ಕಬ್ಬಿಣದ ಕೊರತೆಯಿಂದ ಬಳಲುತ್ತಿರುವವರಿಗೆ ಖರ್ಜೂರವನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ತರಕಾರಿಗಳು, ಪಾಲಾಕ್‌, ಗೆಡ್ಡೆಕೋಸು, ಕಾಳುಗಳು, ಬೀನ್ಸ್, ಬಟಾಣಿ, ಧಾನ್ಯಗಳು ದೈನಂದಿನ ಆಹಾರದ ಭಾಗವಾಗಿರಬೇಕು. ಈ ಆಹಾರವನ್ನು ಮಕ್ಕಳಿಗೆ ನೀಡುವುದರಿಂದ ಕ್ಯಾಲಿಸಿಯಂ ಕೊರತೆ ನೀಗಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!