ರೀಚಾರ್ಜ್ ಮಾಡಿಸೋಕೆ ನೀವು ಬ್ಯಾಂಕ್ ಮುಂದೆಯೋ, ಟೋಲ್ ನಲ್ಲೋ ಕ್ಯೂ ನಿಲ್ಲುವ ಅಗತ್ಯ ಇಲ್ಲ. ಈಗಿನ ಟೆಕ್ನಾಲಜಿಯಿಂದ ಕೇವಲ 2 ನಿಮಿಷದಲ್ಲಿ ನೀವು ರೀಚಾರ್ಜ್ ಮಾಡಬಹುದು. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
- ಫೋನ್ ಪೇ ಅಪ್ಲಿಕೇಷನ್ ಓಪನ್ ಮಾಡಿ
- ಅದರಲ್ಲಿನ Recharge & pay bills ನಲ್ಲಿನ See all ಅನ್ನು ಆಯ್ಕೆ ಮಾಡಿ.
- ಅಲ್ಲಿರುವ ಫಾಸ್ಟ್ ಟ್ಯಾಗ್ ರಿಚಾರ್ಜ್ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.
- ಅಲ್ಲಿ ನಿಮಗೆ ಬ್ಯಾಂಕ್ ಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಫಾಸ್ಟ್ ಟ್ಯಾಗ್ ನೀಡಿರುವ ಬ್ಯಾಂಕ್ ನನ್ನು ಆಯ್ಕೆ ಮಾಡಿ.
- ಅಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ಟೈಪ್ ಮಾಡಿ.(ಪದಗಳ ನಡುವೆ ಯಾವುದೇ ಅಂತರ ನೀಡಬೇಡಿ)
- ಕೆಳಗೆ ಕನ್ಫರಂ ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮ್ಮ ಬ್ಯಾಂಕ್ ಫಾಸ್ಟ್ ಟ್ಯಾಗ್ ನ ಡೀಟೇಲ್ಸ್ ಕಾಣುತ್ತದೆ.
- ಕೊನೆಯಲ್ಲಿ ನೀವು ಎಷ್ಟು ಹಣ ರೀಚಾರ್ಜ್ ಮಾಡಬೇಕೋ ಅದನ್ನು ಫೋನ್ ಪೇ ಯುಪಿಐ ಪಿನ್ ಹಾಕಿ ಬಿಲ್ ಪಾವತಿ ಮಾಡಿದರೆ ಆಯ್ತು.