ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಣುಮಕ್ಕಳೇ ನೀವು ಕೋಪದಲ್ಲಿ ಕೂಗಾಡುವ ಮುನ್ನ ಈ ವಿಚಾರಗಳು ಒಂದು ಕ್ಷಣ ಯೋಚಿಸಿ!

ಹೆಣ್ಣು ಮಕ್ಕಳು ಶಾಂತ ಸ್ವರೂಪಿಯೂ ಹೌದು, ಕಾಳಿಯೂ ಹೌದು.. ಆದರೆ ಕೋಪವನ್ನು ಯಾವ ಸಮಯಕ್ಕೆ ಬಳಸಬೇಕು ಅನ್ನೋದು ತುಂಬಾ ಮುಖ್ಯ. ಕೆಲವೊಮ್ಮ ಮಕ್ಕಳ ಮೇಲೆ, ಗಂಡನ ಮೇಲೆ ವಿನಾಃ ಕಾರಣ ಕೂಗಾಡುತ್ತಾರೆ. ಇದರಿಂದ ಮನೆಯವರೆಲ್ಲಾ ಬೇಸತ್ತು ಹೋಗಿರುತ್ತಾರೆ. ಹಾಗಿದ್ದರೆ ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಲು ಈ ರೀತಿ ಮಾಡಿ…

ಸಮಯ ಪಡೆಯಿರಿ:
ಕೋಪ ಕಡಿಮೆ ಮಾಡಿಕೊಳ್ಳಲು ಮೊಟ್ಟ ಮೊದಲ ಆಯುಧವೇ ಸಮಯ. ಕೋಪ ಬಂದಾಗ ಮಾತನಾಡದೇ ಒಂದು ನಿಮಿಷ ಮೌನವಾಗಿ ಕುಳಿತು ಬಿಡಿ. ಇದರಿಂದಲೂ ಕೋಪ ಕಡಿಮೆಯಾಗುತ್ತದೆ.

ಸಮಸ್ಯೆ ಪರಿಹರಿಸುವ ಜಾಣ್ಮೆ:
ಕೋಪ ಬಂದಿದೆ ಎಂದು ಮತ್ತೊಬ್ಬರನ್ನು ಬೈದು ದೂಷಿಸುವ ಬದಲು ನೀವು ಯಾವ ವಿಚಾರಕ್ಕೆ ಕೋಪ ಬಂದಿದೆ? ಬೇಸರವಾಗಿದ್ಯಾ? ಭಯ ಆಗಿದ್ಯಾ? ಅಂತ ಮೊದಲು ತಿಳಿದುಕೊಂಡು ಅದಕ್ಕೆ ಸರಿಯಾದ ರೀತಯಲ್ಲಿ ಪರಿಹಾರ ಹುಡುಕಿ.

ತಪ್ಪು ಒಪ್ಪಿಕೊಳ್ಳಿ:
ತಪ್ಪು ಎಲ್ಲರೂ ಮಾಡುತ್ತಾರೆ. ಈ ವೇಳೆ ನಿಮ್ಮಿಂದ ಆಗಿರುವ ತಪ್ಪುಗಳನ್ನು ಒಪ್ಪಿಕೊಳ್ಳಿ. ಇದರಿಂದ ಮಾತು ಅಲ್ಲಿಗೆ ನಿಂತು ಜಗಳ ಕಡಿಮೆ ಆಗುತ್ತದೆ.

ಜಾಗದಿಂದ ಹೊರನಡೆಯಿರಿ:
ಕೋಪ ಹೆಚ್ಚಾಗುತ್ತಿದೆ ಎಂದು ತಿಳಿದರೆ ಕೂಡಲೇ ಆ ಜಾಗದಿಂದ ಹೊರ ನಡೆಯಿರಿ. ಈ ವೇಳೆ ನಡೆದು ಒಂದು ವಾಕ್ ಹೋಗಿ ಬನ್ನಿ.

ಮಲಗಿ:
ತುಂಬಾ ಸಿಟ್ಟಿನಲ್ಲಿರುವಾಗ ಯಾವುದೇ ಕಾರಣಕ್ಕೂ ಹೊರಗೆ ಹೋಗುವುದು, ಯಾವುದೇ ಮುಖ್ಯ ಕೆಲಸಗಳನ್ನು ಮಾಡಲು ಹೋಗಬೇಡಿ. ಬದಲಿಗೆ ನಿಮ್ಮ ಮನಸ್ಸಿಗೆ ನೆಮ್ಮದಿ ಕೊಡುವ ನಿದ್ದೆ ಮಾಡಿ.

ವಾದ ಬೇಡ:
ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ. ಕೋಪದಲ್ಲಿ ಯಾವುದೇ ಕಾರಣಕ್ಕೂ ಮಾತಿಗೆ ಮಾತು ಬೆಳಸಿ ವಾದಕ್ಕೆ ಎಡೆಮಾಡಿಕೊಡಬೇಡಿ. ಬದಲಿಗೆ ಸ್ವಲ್ಪ ತಾಳ್ಮೆಯಿಂದ ಪ್ರತಿಕ್ರಿಯಿಸಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss