spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಮೊಬೈಲ್ ನಲ್ಲಿನ ಫೋಟೋಸ್ ಅಚಾನಕ್ ಆಗಿ ಡಿಲೀಟ್ ಆಯ್ತಾ? ಹಾಗಿದ್ದರೆ ಈ ರೀತಿ ರೀಸ್ಟೋರ್ ಮಾಡಿ

ಇತ್ತೀಚಿಗೆ ಮೊಬೈಲ್ ಗಳನ್ನೇ ನಾವು ಸ್ಟೋರೇಜ್ ಬಾಕ್ಸ್ ಮಾಡಿಟ್ಟಿರುತ್ತೇವೆ. ಮೊಬೈಲ್ ಒಂದರಲ್ಲೇ ಸಾವಿರಾರು ಫೋಟೋಗಳನ್ನು ಸೇವ್ ಮಾಡಿರುತ್ತೇವೆ. ಆದರೆ ಅಚಾನಕ್ ಆಗಿ ಕೆಲವು ಮುಖ್ಯವಾದ ಫೋಟೋಗಳು ಡಿಲೀಟ್ ಆದಾಗ ಬೇಜಾರಾಗಬೇಡಿ. ಬದಲಿಗೆ ಈ ಸ್ಟೆಪ್ಸ್ ಫಾಲೋ ಮಾಡಿ.. ಫೋಟೋ ರೀಸ್ಟೋರ್ ಮಾಡಿ

ಮೊಬೈಲ್ ನಲ್ಲಿನ ಫೋಟೋ:

  • ಮೊಬೈಲ್ ಗ್ಯಾಲರಿಯಲ್ಲಿನ ಫೋಟೋ ಡಿಲೀಟ್ ಆದರೆ ಅಲ್ಲಿ ಸಿಗುವ ರೀಸೆಂಟ್ಲಿ ಡಿಲೀಟೆಂಡ್ ಆಪ್ಷನ್ ಅನ್ನು ಆಯ್ಕೆ ಮಾಡಿ. ನಂತರ ರೀಸ್ಟೋರ್ ಮೇಲೆ ಕ್ಲಿಕ್ ಮಾಡಿದರೆ ಫೋಟೋ ವಾಪಸ್ ಗ್ಯಾಲರಿಗೆ ಸೇವ್ ಆಗುತ್ತದೆ.

ಗೂಗಲ್ ಫೋಟೋಸ್ ನಲ್ಲಿರುವ ಫೋಟೋ:

ಮೊಬೈನಲ್ಲಿ ಹೇಗೆ?

  • ಗೂಗಲ್ ಫೋಟೋಸ್ ಆಪ್ ಓಪನ್ ಮಾಡಿ.
  • ಅಲ್ಲಿ ಕಾಣುವ ಲೈಬ್ರರಿ ಕಾಲಂ ಆಯ್ಕೆ ಮಾಡಿಕೊಳ್ಳಿ.
  • ನಂತರ ಅದರಲ್ಲಿ ಬಿನ್ ಆಪ್ಷನ್ ಅನ್ನು ಓಪನ್ ಮಾಡಿಕೊಂಡು ನಿಮಗೆ ಬೇಕಿರುವ ಫೋಟೋಗಳನ್ನು ರೀಸ್ಟೋರ್ ಮಾಡಿಕೊಳ್ಳಬಹುದು.

ಕಂಪ್ಯೂಟರ್ ನಲ್ಲಿ ಹೇಗೆ?

  • ಮೊದಲಿಗೆ ಕ್ರೋಮ್ ನಲ್ಲಿ ನಿಮ್ಮ ಇ-ಮೇಲ್ ಲಾಗ್ ಇನ್ ಮಾಡಿ.
  • ನಂತರ photos.google.com. ಸರ್ಚ್ ಮಾಡಿಕೊಳ್ಳಿ.
  • ಬಳಿಕ ಅಲ್ಲಿ ಎಡ ಭಾಗದಲ್ಲಿ ಕಾಣುವ ಬಿನ್ ಆಪ್ಷನ್ ತೆರೆದು ಫೋಟೋಸ್ ರೀಸ್ಟೋರ್ ಮಾಡಿಕೊಳ್ಳಿ.
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap