ಟೆಕ್ನಾಲಜಿ ಬೆಳೆಯುತ್ತಿದಂತೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಈಗಂತೂ ಎಲ್ಲಾ ಶಾಪಿಂಗ್, ಹಣ ವರ್ಗಾವಣೆ, ಬಿಲ್ ಪಾವತಿಯೂ ಆನ್ ಲೈನ್ ಅಥವಾ ಕಾರ್ಡ್ ನಿಂದಲೇ ಮಾಡುತ್ತೇವೆ. ಹೀಗಿರುವಾಗ ನಮ್ಮ ಕಾರ್ಡ್ ಗಳನ್ನು ಸೇಫ್ ಆಗಿ ಇಡೋದು ಹೇಗೆ? ಇಲ್ಲಿದೆ ಟಿಪ್ಸ್
ಬ್ಯಾಂಕ್ ಬ್ಯಾಲೆನ್ಸ್:
ಆಗಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದ ಮೊತ್ತವನ್ನು ಚೆಕ್ ಮಾಡುತಲಿರಿ. ಏನಾದರು ಅನುಮಾನಾಸ್ಪದ ವ್ಯವಹಾರವಾಗಿದ್ದರೆ ಗಮನಿಸಿ.
ಪಿನ್ ಬದಲಿಸಿ:
ನಿಮ್ಮ ಕಾರ್ಡ್ ಗಳ ಪಿನ್ ಅನ್ನು ಆಗಾಗ ಬದಲಿಸುತ್ತಲಿರಿ. ಜೊತೆಗೆ ಯಾವುದೇ ಕಾರಣಕ್ಕೂ ಪಾಸ್ ವರ್ಡ್ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.
ಆನ್ ಲೈನ್ ಗೆ ಕಾರ್ಡ್ ಬೇಡ:
ನೀವು ಮಾಡುವ ಆನ್ ಲೈನ್ ಖರೀದಿಗಳಿಗೆ ಯಾವುದೇ ಕಾರಣಕ್ಕೂ ನಿಮ್ಮ ಕಾರ್ಡ್ ಡೀಟೇಲ್ಸ್ ನಮೂದಿಸಬೇಡಿ. ಬದಲಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿ.
ಎಟಿಎಂ:
ಯಾವುದೇ ಅಂಗಡಿಗಳಲ್ಲಿ ಖರೀದಿಸುವಾಗ ನೀವು ಕಾರ್ಡ್ ಬಳಸಬೇಡಿ. ಎಟಿಎಂ ನಿಂದ ಹಣ ಡ್ರಾ ಮಾಡಿ ಕ್ಯಾಶ್ ಬಳಸಿ.
ಫ್ರೀ ವೈಫೈ:
ಯಾವುದೇ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸಿಗುವ ಫ್ರೀ ವೈಫೈ ಬಳಸಿ ಹಣ ವರ್ಗಾವಣೆ ಮಾಡಬೇಡಿ. ಇದರಿಂದ ನಿಮ್ಮ ಪಾಸ್ ವರ್ಡ್ ಹ್ಯಾಕ್ ಆಗುವ ಸಾಧ್ಯತೆಯೇ ಹೆಚ್ಚು.
ಸಮಸ್ಯೆ ಪರಿಹರಿಸಿ:
ನಿಮ್ಮ ಖಾತೆಯಿಂದ ಅನುಮಾನಾಸ್ಪದವಾಗಿ ಹಣ ವರ್ಗಾವಣೆಯಾಗಿದ್ದರೆ ತಡ ಮಾಡದೆ ನಿಮ್ಮ ಬ್ಯಾಂಕ್ ಗೆ ದೂರು ನೀಡಿ. ಪರಿಶೀಲಿಸಿ.