ಸೈಬರ್ ಕ್ರೈಂ ಅನ್ನೋದು ಕಾನೂನು ಬಾಹಿರ ಕೃತ್ಯ ಎಂದು ನಾವು ಹೇಳಬಹುದು. ಇಲ್ಲಿ ಕಂಪ್ಯೂಟರ್ ಅನ್ನು ಮೂಲ ವಸ್ತುವಾಗಿ ಬಳಸುತ್ತಾರೆ. ಇದರಿಂದ ಕಳ್ಳತನ,ವಂಚನೆ,ಖೋಟಾ,ಮಾನಹಾನಿ ಮತ್ತು ಕಿಡಿಗೇಡಿತನದಂತಹ ಕ್ರಿಮಿನಲ್ ಚಟುವಟಿಕೆಗಳೂ ನಡೆಯುತ್ತದೆ. ಹಾಗಿದ್ದರೆ ಇನ್ಮುಂದೆ ಸೈಬರ್ ಕ್ರೈಂ ನಿಂದ ಸೇಫ್ ಆಗಿರೋಕೆ ಈ ವಿಚಾರಗಳನ್ನು ನೆನಪಿಡಿ..
- ಇಂಟರ್ ನೆಟ್ ಬಳಕೆ ಬಗ್ಗೆ ಜೋಪಾನಾ. ಯಾವುದೇ ಖಾಸಗಿ ಅಥವಾ ಆರ್ಥಕ ವಿಚಾರ ಹಂಚಿಕೊಳ್ಳಬೇಡಿ.
- ಸ್ಟ್ರಾಂಗ್ ಪಾಸ್ ವರ್ಡ್ ಕೊಡಿ. ಅದರಲ್ಲಿ ಕನಿಷ್ಠ 8 ಕ್ಯಾರೆಕ್ಟರ್ ಗಳಿರಬೇಕು.
- ನಿಮ್ಮ ಸಾಮಾಜಿಕ ಜಾಲತಾಣದ ಸೆಟ್ಟಿಂಗ್ಸ್ ಅನ್ನು ಮ್ಯಾನೇಜ್ ಮಾಡಿ. ಯಾವುದನ್ನು ಸಾರ್ವಜನಿಕರು ವೀಕ್ಷಿಸಬಹುದು, ಯಾವುದು ಖಾಸಗಿ ಮಾಹಿತಿಯಾಗಿರಬೇಕು ನೋಡಿ.
- ನಿಮ್ಮ ಮಕ್ಕಳಿಗೆ ಇಂಟರ್ ನೆಟ್ ಬಗ್ಗೆ ಮಾಹಿತಿ ಕೊಡಿ. ಸೈಬರ್ ಕ್ರೈಂ ನಿಂದ ಏನೆಲ್ಲಾ ಅಪಾಯವಾಗುತ್ತೆ ಅಂತ ತಿಳಿಸಿ.
- ನಿಮ್ಮ ಖಾತೆಗಳು ಹ್ಯಾಕ್ ಆಗಿದ್ದರೆ ಕೂಡಲೇ ಅದರ ಪಾಸ್ ವರ್ಡ್ ಬದಲಿಸಿ.
- ನಿಮ್ಮ ವಿಪಿಎನ್ ಹಾಗೂ ಖಾಸಗಿ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
- ಯಾವುದೇ ಕಾರಣಕ್ಕು ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳಲ್ಲಿನ ಸಂಖ್ಯೆಯನ್ನು ಯಾರಿಗೂ ಹೇಳಬೇಡಿ.
- ಜಾಗೃತೆ ಇದ್ದರೂ ಕೂಡ ಕೆಲವೊಮ್ಮೆ ನಮ್ಮ ಖಾತೆಗಳು ಹ್ಯಾಕ್ ಆಗಲಿದೆ. ಆಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ.
- Advertisement -