ಐಫೋನ್ ಹಾಗೂ ಆಂಡ್ರಾಯ್ಡ್ ವಾಟ್ಸ್ ಆಪ್ ಗಳಲ್ಲಿ ಮಾಡುವ ಚಾಟ್ ಅನ್ನು ನೀವು ಬೇರೆಯವರಿಗೆ ಶೇರ್ ಮಾಡಬಹುದು ಅಂತ ಬಹಳಷ್ಟು ಜನರಿಗೆ ತಿಳಿದೇ ಇರುವುದಿಲ್ಲ. ಹಾಗಿದ್ದರೆ ನೋಡಿ.. ಬಹು ಮುಖ್ಯ ಚಾಟ್ ಗಳನ್ನು ನೀವು ಶೇರ್ ಮಾಡೋದು ಹೇಗೆ ಅಂತ ತಿಳಿಯಿರಿ..
ಆಂಡ್ರಾಯ್ಡ್ ಫೋನ್:
- ಮೊದಲಿಗೆ ನೀವು ಶೇರ್ ಮಾಡಬೇಕಿರುವ ಚಾಟ್ ಓಪನ್ ಮಾಡಿ.
- ಚಾಟ್ ಸ್ಕ್ರೀನ್ ನ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ.
- ಬಳಿಕ More ಆಪ್ಷನ್ ಆಯ್ಕೆ ಮಾಡಿಕೊಂಡು Export chat ಆಯ್ಕೆ ಮಾಡಿ.
- ಕೊನೆಯಲ್ಲಿ ನೀವು ಯಾರಿಗೆ, ಯಾವ ಆಪ್ ಮೂಲಕ ಕಳುಹಿಸಬೇಕು ಎಂದು ಆಯ್ಕೆ ಮಾಡಿಕೊಂಡು ಅವರಿಗೆ ಶೇರ್ ಮಾಡಿದರೆ ಆಯ್ತು.
ಐಫೋನ್:
- ಮೊದಲಿಗೆ ನೀವು ಶೇರ್ ಮಾಡಬೇಕಿರುವ ಚಾಟ್ ಓಪನ್ ಮಾಡಿ.
- ನಂತರ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ contact info ತೆರೆದುಕೊಳ್ಳಿ.
- ಕೆಳಗೆ Export chat ಆಯ್ಕೆ ಮಾಡಿಕೊಳ್ಳಿ.
- ಕೊನೆಯಲ್ಲಿ ನೀವು ಯಾರಿಗೆ, ಯಾವ ಆಪ್ ಮೂಲಕ ಕಳುಹಿಸಬೇಕು ಎಂದು ಆಯ್ಕೆ ಮಾಡಿಕೊಂಡು ಅವರಿಗೆ ಶೇರ್ ಮಾಡಿದರೆ ಆಯ್ತು.