Wednesday, July 6, 2022

Latest Posts

ದಿನ ಚೆನ್ನಾಗಿರೋದು ಹೇಗೆ? ಬೆಳಗ್ಗೆಯನ್ನು ಈ ರೀತಿ ಪ್ರಾರಂಭಿಸಿದಾಗ ಮಾತ್ರ…

ಸಕಾರಾತ್ಮಕವಾಗಿ ಇರುವುದು ಹೇಗೆ? ನಮ್ಮ ಮೂಡ್ ಹಾಳಾಗದಂತೆ ನಾವೇ ಕಾಪಾಡಿಕೊಳ್ಳಬೇಕು. ಮೂಡ್ ಹಾಳಾದರೆ ಇಡೀ ದಿನವೇ ಹಾಳಾಗುತ್ತದೆ. ಮಾಡಬೇಕಾದ ಕೆಲಸ ಮುಂದೆ ಹೋಗುತ್ತದೆ. ಬೆಳಗ್ಗಿನ ಸಮಯದಲ್ಲಿ ಈ ರೀತಿ ನಡೆದುಕೊಳ್ಳಿ. ಬೆಳಗ್ಗೆ ನೀವು ಇರುವ ರೀತಿಯಿಂದ ಇಡೀ ದಿನ ನಿರ್ಧರಿತವಾಗುತ್ತದೆ…

  • ಕನಸುಗಳನ್ನು ನೆನಪಿಸಿಕೊಳ್ಳಿ, ಫನ್ನಿಯಾಗಿದ್ದರೆ ಮನೆಯವರಿಗೂ ಹೇಳಿಕೊಂಡು ನಕ್ಕುಬಿಡಿ.
  • ಸಣ್ಣಪುಟ್ಟ ವಿಷಯಗಳಿಗೆ ಮನೆಯವರ ಜೊತೆ ಬೆಳಗ್ಗೆಯೇ ಜಗಳ ಆರಂಭಿಸಬೇಡಿ. ಮನೆಯಲ್ಲಿ ನೆಮ್ಮದಿ ಮುಖ್ಯ.
  • ಯಾವುದರಿಂದ ನಿಮಗೆ ಖುಷಿ ಸಿಗುತ್ತದೆ? ಅಂದಿನ ತಿಂಡಿ ಮೆನ್ಯು ನಿರ್ಧರಿಸುವುದಾಗಲಿ, ಸ್ನಾನಕ್ಕೆ ಬಿಸಿ ನೀರು ಬರುವುದು ಇಂಥದ್ದರಲ್ಲೇ ಖುಷಿ ಇರಲಿ.
  • ಎಷ್ಟೋ ಮಂದಿಯ ಬಳಿ ಅನ್ನ, ನೀರು ತಲೆ ಮೇಲೆ ಸೂರಿಲ್ಲ. ನೀವೆಷ್ಟು ಲಕ್ಕಿ? ಯೋಚಿಸಿ.
  • ದೇಹ ದಂಡಿಸದೆ ಖುಷಿಯಾಗೋದು ಹೇಗೆ? ದಿನವೂ ದೇಹದಂಡನೆಗೆ ಸ್ವಲ್ಪ ಸಮಯ ಮೀಸಲಿಡಿ.
  • ನಿನ್ನೆಯ ಆಲೋಚನೆಗಳಿಗೆ ನಿಮ್ಮ ಅಮೂಲ್ಯ ಸಮಯ ನೀಡಬೇಡಿ.
  • ಆಫೀಸಿನ ಸಮಸ್ಯೆ ಮನೆಗೆ ತರಬೇಡಿ. ಆಫೀಸಿಗೆ ಹೋದಮೇಲೆ ಅದಕ್ಕೆ ಪರಿಹಾರ ಹುಡುಕಬಹುದು.
  • ಸಾಮಾಜಿಕ ಜಾತಲಾಣದಲ್ಲಿ ಇರಿ. ಆದರೆ ಅದನ್ನೇ ಜೀವನ ಮಾಡಿಕೊಳ್ಳಬೇಡಿ. ಯಾರ ಲೈಫ್ ಹೇಗಿದೆ ಎಂದು ತಿಳಿಯುವಷ್ಟು ಸಮಯ ಎಲ್ಲಿದೆ?
  • ನಿಮ್ಮಿಷ್ಟದ ತಿಂಡಿ ಮಾಡಲು ಸಹಾಯ ಮಾಡಿ, ಅಮ್ಮನ ಜೊತೆ ಟೈಮ್‌ಪಾಸ್ ಮಾಡಿ.
  • 1೦ ನಿಮಿಷ ಮುನ್ನವೇ ಆಫೀಸ್ ತಲುಪಿ. ಅರ್ಜೆಂಟ್‌ನಲ್ಲಿ ಕೆಲಸಕ್ಕೆ ಓಡಿ ಬರುವುದು ಬೇಡ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss