ಈಗೆಲ್ಲ ಯುವ ಪೀಳಿಗೆಗೂ ಡಯಾಬಿಟಿಸ್ ಕಾಡುತ್ತಿದೆ. ಒಮ್ಮೆ ಡಯಾಬಿಟಿಸ್ ಬಂದುಬಿಟ್ಟರೆ ಜೀವನ ಮೊದಲಿನಂತೆ ಇರೋದಿಲ್ಲ. ಒಂದರ ಜೊತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಇಷ್ಟಪಟ್ಟ ಸಿಹಿ ತಿಂಡಿ ತಿನ್ನೋದು ಕೂಡ ಕನಸಾಗಿ ಬಿಡುತ್ತದೆ. ಶುಗರ್ ಬಂದಿಲ್ಲ, ಬರೋದು ಬೇಡ ಅನ್ನೋದಾದ್ರೆ ಈ ಆರೋಗ್ಯಕರ ಲೈಫ್ಸ್ಟೈಲ್ ನಿಮ್ಮದಾಗಿಸಿ.
ಹೆಚ್ಚು ಸಕ್ಕರೆ ಅಂಶ ಇರುವ ಆಹಾರ, ಕಾರ್ಬೋಹೈಡ್ರೇಟ್ಸ್ ಇರುವ ತಿಂಡಿಗಳನ್ನು ಈಗಿನಿಂದಲೇ ಕಡಿಮೆ ಮಾಡಿ.
ಹಸಿದುಕೊಂಡು ಇರಬೇಡಿ, ಅದರಲ್ಲೂ ಬೆಳಗ್ಗೆ ಎದ್ದ ನಂತರ ಏನಾದರೂ ಒಂದನ್ನು ತಿನ್ನಿ. ಹೊಟ್ಟೆ ಖಾಲಿ ಬಿಟ್ಟಷ್ಟು ಕಷ್ಟ ಹೆಚ್ಚು.
ಧೂಮಪಾನ, ಮದ್ಯಪಾನ ಶುಗರ್ ಅಷ್ಟೇ ಅಲ್ಲ, ಯಾವುದಕ್ಕೂ ಒಳ್ಳೆಯದಲ್ಲ. ಎಲ್ಲವನ್ನೂ ಬಿಟ್ಟುಬಿಡಿ.
ಒಂದೇ ಸಲಕ್ಕೆ ಗಬಗಬನೆ ಜಾಸ್ತಿ ಆಹಾರ ಸೇವನೆ ಮಾಡಬೇಡಿ. ದಿನಕ್ಕೆ ನಾಲ್ಕು ಅಥವಾ ಐದು ಹೊತ್ತು ತಿಂದರೂ ಪರವಾಗಿಲ್ಲ ಸಣ್ಣ ತಟ್ಟೆಯಲ್ಲಿ, ಸ್ವಲ್ಪ ಸ್ವಲ್ಪ ತಿನ್ನಿ.
ಪ್ರತಿದಿನ 30 ನಿಮಿಷದ ದೈಹಿಕ ಚಟುವಟಿಕೆ ನಿಮ್ಮದಾಗಿರಲಿ. ವಾಕ್, ಜಾಗ್, ರನ್, ಸೈಕಲ್, ಸ್ವಿಮ್ ಏನೇ ಆಗಿರಲಿ.30 ನಿಮಿಷ ಆಕ್ಟೀವ್ ಆಗಿರಿ.
ಹೆಚ್ಚು ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ. ದಿನಕ್ಕೆ ಮೂರು ಲೀಟರ್ ನೀರು ಕಡ್ಡಾಯ.
ಫೈಬರ್ ಆಹಾರ ಸೇವಿಸಿ. ಫೈಬರ್ ಅಂಶವುಳ್ಳ ಆಹಾರದಿಂದ ಆರೋಗ್ಯ ವೃದ್ಧಿ. ಡಯಾಬಿಟಿಸ್ ದೂರ.
ಸಕ್ಕರೆ ಹಾಕಿದ ಜ್ಯೂಸ್ಗಳು, ಕಾರ್ಬೋನೇಟೆಡ್ ಡ್ರಿಂಕ್ಗಳು, ಬೇಕರಿ ಆಹಾರ ಕಡಿಮೆ ಮಾಡಿ.