ಗ್ಯಾಸ್ಟ್ರಿಕ್ನಿಂದ ಮುಜುಗರ ಅಷ್ಟೇ ಅಲ್ಲ, ನೋವು ಕೂಡ ಅನುಭವಿಸಬೇಕಾಗುತ್ತದೆ. ಬೆನ್ನಿನಲ್ಲಿ ಅಥವಾ ಹೊಟ್ಟೆಯಲ್ಲಿ ಗ್ಯಾಸ್ ಹಿಡಿದುಕೊಂಡರೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಗ್ಯಾಸ್ಟ್ರಿಕ್ ನಮ್ಮ ಹತ್ತಿರ ಬರೋದಕ್ಕೆ ನಾವು ಮಾಡುವ ತಪ್ಪುಗಳು ಕಾರಣ. ಗ್ಯಾಸ್ಟ್ರಿಕ್ ಬರಬಾರದೆಂದರೆ ಹೀಗೆ ಮಾಡಿ..
- ನಿಂತು ತಿನ್ನಬೇಡಿ. ಕುಳಿತು ತಿನ್ನಿ, ನಿಧಾನವಾಗಿ ಅಗಿದು ತಿನ್ನಿ.
- ಊಟ ಮಾಡುತ್ತಾ ಗಾಳಿ ಒಳಗೆ ಹೋಗದಂತೆ ನೋಡಿಕೊಳ್ಳಿ.
- ಬೆಳಗ್ಗೆ ಗಂಟೆಗಟ್ಟಲೆ ಹೊಟ್ಟೆ ಖಾಲಿ ಬಿಡಬೇಡಿ. ಎದ್ದ ತಕ್ಷಣ ಏನಾದರೂ ತಿನ್ನಿ.
- ಚೂಯಿಂಗ್ ಗಮ್ ಸೇವಿಸುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ.
- ಸೋಡಾ ಹಾಗೂ ಕಾರ್ಬೋನೇಟೆಡ್ ಡ್ರಿಂಕ್ಸ್ನಿಂದ ದೂರ ಇರಿ.
- ಊಟದ ತಕ್ಷಣ ಮಲಗಬೇಡಿ, ವಾಕ್ ಮಾಡಿ ಮಲಗಿ.
- ಗ್ಯಾಸ್ ಸೃಷ್ಟಿಸುವ ಆಲೂಗಡ್ಡೆ, ಬದನೆಯಕಾಯಿ, ಟೀ ಇಂಥ ಆಹಾರದಿಂದ ದೂರ ಇರಿ.
- ಧೂಮಪಾನ ಮದ್ಯಪಾನ ಬಿಟ್ಟುಬಿಡಿ.
- ಫೈಬರ್ ಆಹಾರ ಸೇವಿಸಿ.
- ಸ್ಟ್ರಾದಲ್ಲಿ ಜ್ಯೂಸ್ ಕುಡಿಯಬೇಡಿ.
- ಹೊಟ್ಟೆ ಕೆಡುತ್ತದೆ ಎಂದು ಗೊತ್ತಿರುವ ಆಹಾರ ಪದಾರ್ಥ ಸೇವಿಸಬೇಡಿ.
- ಆಗಾಗ ಜೀರಿಗೆ, ಸೋಂಪು ಬಾಯಲ್ಲಿ ಹಾಕಿಕೊಳ್ಳಿ.
- Advertisement -