ಈಗಿನ ಲೈಫ್ಸ್ಟೈಲ್ನಿಂದಾಗಿ ಎಷ್ಟೋ ಹೆಣ್ಣುಮಕ್ಕಳಿಗೆ ನೈಸರ್ಗಿಕವಾಗಿ ಪಿರಿಯಡ್ಸ್ ಆಗುತ್ತಿಲ್ಲ. ತಿಂಗಳಿಗೊಮ್ಮೆ ಸರಿಯಾಗಿ ಪಿರಿಯಡ್ಸ್ ಆಗುವುದಿಲ್ಲ, ಎರಡು ತಿಂಗಳಿಗೊಮ್ಮೆ ಪಿರಿಯಡ್ಸ್ ಆದರೂ ನಾಲ್ಕು ದಿನವೂ ಬ್ಲೀಡಿಂಗ್ ಆಗುವುದಿಲ್ಲ. ಹೆಚ್ಚಿನ ಹೆಣ್ಣುಮಕ್ಕಳು ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಾರೆ. ಪೊಲಿಸಿಸ್ಟಿಕ್ ಓವರ್ ಸಿಂಡ್ರೋಮ್ನ ಲಕ್ಷಣಗಳೇನು? ಇದನ್ನು ಹಿಡಿತದಲ್ಲಿ ಇಟ್ಟುಕೊಳ್ಳೋದು ಹೇಗೆ?
ಲಕ್ಷಣಗಳು
- ಮುಖದಲ್ಲಿ ಹೆಚ್ಚು ಕಲೆಗಳು.
- ತೂಕ ಹೆಚ್ಚಳ, ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಯದಿರುವುದು.
- ಮುಖ ಅಥವಾ ದೇಹದ ಮೇಲೆ ಹೆಚ್ಚು ಕೂದಲು ಬೆಳೆಯುವುದು.
- ತಲೆಕೂದಲು ಉದುರಿ ತೆಳ್ಳಗಾಗುವುದು.
- ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗದಿರುವುದು, ಪಿರಿಯಡ್ಸ್ ಆದರೆ ಬ್ಲೀಡಿಂಗ್ ನಿಲ್ಲದೇ ಇರುವುದು.
- ಸಂತಾನ ಸಮಸ್ಯೆಗಳು
- ಖಿನ್ನತೆ ಕಾಡುವುದು
ಪಿಸಿಒಡಿಯಿಂದ ದೂರ ಇರುವುದು ಹೇಗೆ?
- ನಿಮ್ಮ ಡಯಟ್ನಲ್ಲಿ ಫೈಬರ್ ಇರಲಿ
- ಹಸಿರು ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ
- ವ್ಯಾಯಾಮ ಹೆಚ್ಚಾಗಿ ಮಾಡಿ. ಫಿಸಿಕಲ್ ಆಗಿ ಆಕ್ಟೀವ್ ಆಗಿರುವುದು ಮುಖ್ಯ.
- ಯೋಗ, ಸೂರ್ಯನಮಸ್ಕಾರದಿಂದ ಎಲ್ಲ ರೀತಿಯ ಒತ್ತಡ ಹೋಗುತ್ತದೆ.
- ಆದಷ್ಟು ತೂಕ ಇಳಿಸಿ, ಹೆಲ್ತಿ ತೂಕ ಇದ್ದಷ್ಟು ಒಳ್ಳೆಯದು.