ಹೊಸದಿಗಂತ ಆನ್ ಲೈನ್ ಡೆಸ್ಕ್:
ಪೀರಿಯಡ್ಸ್ ನಲ್ಲಿ ಕೇವಲ ಹೊಟ್ಟೆ ನೋವು ಮಾತ್ರವಲ್ಲದೆ ಕೆಲವರಿಗೆ ವಾಂತಿ, ಜ್ವರದ ಸಮಸ್ಯೆಯೂ ಕಾಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳಿತು.. ಪೀರಿಯಡ್ಸ್ ನಲ್ಲಿ ಬರುವ ವಾಂತಿ ತಡೆಯಲು ಈ ಟಿಪ್ಸ್ ಅನುಸರಿಸಿ…
ಶುಂಠಿ:
ಫೀರಿಯಡ್ಸ್ ಹೊಟ್ಟೆ ನೋವು, ವಾಂತಿ ಗೆ ಶುಂಠಿ ಔಷಧವಾಗಿದೆ. ಶುಂಠಿಯನ್ನು ಟೀ ಅಥವಾ ಆಹಾರದಲ್ಲಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
ಚಕ್ಕೆ:
ಆಂಟಿ ಇನ್ಫ್ಲಾಮೆಟರಿ ಅಂಶವಿರುವ ಚಕ್ಕೆಯ ಸೇವನೆಯಿಂದ ಪೀರಿಯಡ್ಸ್ ನೋವನ್ನು ಕಡಿಮೆ ಮಾಡುವುದು ಮಾತ್ರವಲ್ಲಿದೇ ವಾಂತಿಯಾಗದಿರಲು ಸಹಕಾರಿಯಾಗಲಿದೆ.
ಸಾಫ್ಟ್ ಫುಡ್:
ಪೀರಿಯಡ್ಸ್ ನಲ್ಲಿ ಆದಷ್ಟು ಮೃದು ಆಹಾರಗಳನ್ನು ಸೇವಿಸಿದರೆ ಉತ್ತಮ. ಪೀರಿಯಡ್ಸ್ ನಲ್ಲಿ ಹೆಚ್ಚು ಖಾರ, ಫ್ರೈ ಮಾಡಿರುವ ಆಹಾರ ಸೇವಿಸಬಾರದು.
ನೀರು:
ಪೀರಿಯಡ್ಸ್ ನಲ್ಲಿ ಹೆಚ್ಚು ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗುವುದು. ನೀರು ಸೇವನೆಯು ಹೊಟ್ಟೆ ನೋವು ಹಾಗೂ ವಾಂತಿ ಕಾಡುವುದಿಲ್ಲ.
ಕೋಲ್ಡ್ ಪ್ಯಾಕ್:
ಪೀರಿಯಡ್ಸ್ ಸಮಯದಲ್ಲಿ ಹಣೆಯ ಮೇಲೆ ಕೋಲ್ಡ್ ಪ್ಯಾಕ್ ಇರಿಸುವುದು ಇರಿಸುವದರಿಂದ ವಾಂತಿ ಬರುವುದನ್ನು ತಡೆಯಬಹುದು
ಗಾಳಿ:
ಮುಟ್ಟಿನಲ್ಲಿ ಕೆಲವೊಮ್ಮೆ ಹೆಚ್ಚು ಸುಸ್ತು, ಆಯಾಸ ವಾಗುತ್ತದೆ. ಈ ವೇಳೆಯಲ್ಲಿ ಗಾಳಿಯ ಕೆಳಗೆ ಮಲಗುವುದರಿಂದ ವಾಂತಿ ಬರುವುದಿಲ್ಲ.