KICTHEN TIP| ಶುಂಠಿಯನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸುವುದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಚಹಾದಲ್ಲಿ ಶುಂಠಿ ಸೇವಿಸಿದರೆ ಕಾಯಿಲೆ ಬರುವುದಿಲ್ಲ. ಶುಂಠಿಯನ್ನು ಹಸಿಯಾಗಿ ಜಗಿದು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ ಚಳಿಗಾಲದಲ್ಲಿ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿತ್ಯ ಬಳಸುವ ಶುಂಠಿಯನ್ನು ಶೇಖರಿಸಿಡಲು ಎಚ್ಚರಿಕೆ ವಹಿಸಬೇಕು. ಶುಂಠಿಯನ್ನು ದೀರ್ಘಕಾಲದವರೆಗೆ ಬಿಟ್ಟರೆ, ಅದು ಹೆಚ್ಚು ಕಾಲ ಸಂಗ್ರಹವಾಗುವುದಿಲ್ಲ. ಬೇಗನೆ ಒಣಗುತ್ತದೆ ಹಾಗಾಗಿ ಹೆಚ್ಚು ಕಾಲ ಸಂಗ್ರಹಿಸಲು ಹಲವು ಮಾರ್ಗಗಳಿವೆ.

1. ಶುಂಠಿಯನ್ನು ಪೇಪರ್ ಅಥವಾ ಪಾಲಿಥಿನ್ ಬ್ಯಾಗ್ ನಲ್ಲಿಟ್ಟು ಫ್ರಿಡ್ಜ್ ನಲ್ಲಿಟ್ಟರೆ ಅದು ದೀರ್ಘಕಾಲ ತಾಜಾತನವನ್ನು ಕಾಪಾಡುತ್ತದೆ.

2. ಶುಂಠಿಯನ್ನು ತೊಳೆದು ಒಣಗಿಸಿ ಮತ್ತು ಸಣ್ಣ ತುಂಡುಗಳಾಗಿ ಕತ್ತರಿಸಿ. ಅಥವಾ ಪುಡಿಯಾಗಿ ಪರಿವರ್ತಿಸಿ ಬಾಟಲಿಯಲ್ಲಿ ಸಂಗ್ರಹಿಸದರೆ ಹೆಚ್ಚಿನ ದಿನ ಇರುತ್ತದೆ.

3. ಶುಂಠಿಯನ್ನು ವಿನೆಗರ್ ಅಥವಾ ನಿಂಬೆ ರಸದಲ್ಲಿ ಶೇಖರಿಸಿ ಫ್ರಿಡ್ಜ್ ನಲ್ಲಿ ಇಡಬಹುದು.

4. ಶುಂಠಿ ತುಂಡುಗಳನ್ನು ಡಬ್ಬದಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟರೆ ಎರಡು ತಿಂಗಳ ಕಾಲ ಬರುತ್ತದೆ.

5. ಶುಂಠಿಯನ್ನು ಒಣಗಿಸಿ ಒರೆಸಿ ಕಾಗದದಲ್ಲಿ ಚೆನ್ನಾಗಿ ಸುತ್ತಿ. ಅದನ್ನು ಗಾಳಿಯಾಡದಂತೆ ಇರಿಸಿ. ಹೀಗೆ ಮಾಡುವುದರಿಂದ ಹೆಚ್ಚು ದಿನ ಸಂಗ್ರಹವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!