ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಮೊಬೈಲ್ ನಲ್ಲಿ ಸ್ಟೋರೇಜ್ ಇಲ್ವಾ? ಹಾಗಿದ್ರೆ ನಿಮ್ಮ ಡೇಟಾಗಳನ್ನು ಹೀಗೂ ಸ್ಟೋರ್ ಮಾಡ್ಬೋದು

ನಾವು ಅದೆಷ್ಟು ಫೋಟೋ, ವಿಡಿಯೋ, ಡಾಕ್ಯುಮೆಂಟ್ಸ್ ಗಳನ್ನು ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿರುತ್ತೇವೆ. ಆದರೆ ಮೊಬೈಲ್ ನಲ್ಲಿರುವ ಸ್ಟೋರೇಜ್ ಕ್ಯಪಾಸಿಟಿಗಿಂತ ಹೆಚ್ಚು ಶೇಕರಿಸಿ ಇಡಲು ಸಾಧ್ಯವಿರೋದಿಲ್ಲ. ಹೀಗಿರುವಾಗ ನೀವು ಯಾವ ರೀತಿ ಡೇಟಾ ಸ್ಟೋರ್ ಮಾಡಬಹುದು.

  • ಡಿವಿಡಿ: ನಿಮಗೆ ಅಗತ್ಯವಿರುವಷ್ಟು ಜಿಬಿಯ ಡಿವಿಡಿ ಖರೀದಿಸಿ ಅದರಲ್ಲಿ ನಿಮ್ಮ ಫೋಟೋ, ವಿಡಿಯೋಗಳನ್ನು ಸ್ಟೋರ್ ಮಾಡಬಹುದು. ಇದನ್ನು ನಿಮ್ಮ ಲ್ಯಪ್ ಟಾಪ್, ದೆಸ್ಕ್ ಟಾಪ್ ನಲ್ಲಿ ಹಾಕಿ ವೀಕ್ಷಿಸಬಹುದು.
  • ಲ್ಯಾಪ್ ಟಾಪ್: ಇದರಲ್ಲಿನ ಡಿ, ಇ ಸೇರರಿದಂತೆ ಇತರೆ ಡ್ರೈವ್ ಗಳಲ್ಲಿ ನಿಮ್ಮ ಡೇಟಾಗಳನ್ನು ಸ್ಟೋರ್ ಮಾಡಬಹುದು.
  • ಪೆನ್ ಡ್ರೈವ್: ಇತ್ತೀಚಿಕೆ ಪೆನ್ ಟ್ರೈವ್ ಬಳಕೆ ತುಂಬಾ ಸಲೀಸಾಗಿದ್ದು, ಎಲ್ಲಾ ವೃತ್ತಿಪರರಿಗೂ ಅಥವಾ ನಮ್ಮ ಪರ್ಸನಲ್ ಡೇಟಾ ಸೇವ್ ಮಾಡಬಹುದು.
  • ಎಸ್ ಡಿ ಕಾರ್ಡ್: ಮೊಬೈಲ್ ನಲ್ಲಿ ಹಾಕುವ ಎಸ್ ಡಿ ಕಾರ್ಡ್ ಗಳ ಬಳಕೆ ಹೆಚ್ಚು ಪರಿಚಿತವಾಗಿದ್ದು, ಕಡಿಮೆ ದರದಲ್ಲಿ ಹೆಚ್ಚು ಜಿಬಿ ಸ್ಟೋರೇಜ್ ಲಭ್ಯವಾಗಲಿದೆ.
  • ಹಾರ್ಡ್ ಡಿಸ್ಕ್: ಇದು ಕೂಡ ಒಂದು ವಿಭಿನ್ನ ಪ್ರಯತ್ನವಾಗಿದ್ದು, ನಿಮ್ಮ ಯಾವುದೇ ಡಾಕ್ಯುಮೆಂಟ್, ಫೋಟೋ, ವಿಡಿಯೋಗಳನ್ನು ಸ್ಟೋರ್ ಮಾಡಬಹುದು.
  • ಕ್ಲೌಡ್: ಐ ಫೋನ್ ಪ್ರಿಯರಿಗೆ ಇದು ಭಾಗ್ಯವೇ ಸರಿ. ನಿಮಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಸ್ಟೋರೇಜ್ ಸ್ಪೇಸ್ ಅನ್ನು ಕ್ಲೌಡ್ ನೀಡುತ್ತದೆ.
  • ಗೂಗಲ್ ಡ್ರೈವ್: ನಿಮ್ಮ ಇ ಮೇಲ್ ಗೆ ಸಂಬಂಧಿಸಿರುವ ಡ್ರೈ ನಲ್ಲಿ ಟಿಬಿ ಗಟ್ಟಲೇ ಸ್ಟೋರೇಜ್ ಲಭ್ಯವಿರುತ್ತದೆ. ನಿಮಗೆ ಬೇಕಾದಷ್ಟು ಖರೀದಿಸಬಹುದು. ಇದು ಕೂಡ ನಿಮಗೆ ಸೇಫ್.

ಈ ಮೇಲಿನ ಯಾವುದರಲ್ಲಾದರೂ ನಿಮ್ಮ ಡೇಟಾಗಳನ್ನು ಸ್ಟೋರ್ ಮಾಡಬಹುದು. ನಿಮಗೆ ಅಗತ್ಯವಿರುವ ಸ್ಟೋರೇಜ್ ಗಳನ್ನು ಖರೀದಿ ಮಾಡಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss