ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ ಪಾರ್ಟ್‌ನರ್ ಜೊತೆ ದುಡ್ಡಿನ ಮಾತುಕತೆ ಆಡುವಾಗ ಹುಷಾರು.. ಈ ರೀತಿ ಸೂಕ್ಷ್ಮವಾಗಿ ಮಾತನಾಡೋದು ಬೆಟರ್!

ಸಂಬಂಧದಲ್ಲಿ ಮಾತುಕತೆ ತುಂಬಾನೇ ಮುಖ್ಯ. ಮಾತನಾಡಿದರೆ ಮಾತ್ರ ವಿಷಯಗಳು ಹೊರಬರುತ್ತವೆ. ಗಂಡ-ಹೆಂಡತಿ ಆಗಲಿ, ಪ್ರೇಮಿಗಳೇ ಆಗಲಿ ಈಗಿನ್ನು ಅರ್ಥ ಮಾಡಿಕೊಳ್ಳುತ್ತಿರುತ್ತೀರ. ನೀವಿಬ್ಬರೂ ಒಬ್ಬ ಇಂಡಿವಿಶ್ಯುಯಲ್ ವ್ಯಕ್ತಿಗಳು. ಇಬ್ಬರೂ ಇಂಡಿಪೆಂಡೆಂಟ್ ಕೂಡ.. ಜೊತೆಯಾಗಿ ಬಾಳೋಕೆ ಆರಂಭಿಸಿದಾಗ ದುಡ್ಡಿನ ವಿಷಯದಲ್ಲಿ ಮಾತು ಆಗುತ್ತದೆ. ಗಂಡಸರಿಗೆ ಎಲ್ಲಾದರೂ ಒಂದು ಮೂಲೆಯಲ್ಲಿ ಸಣ್ಣ ಈಗೋ ಇರುತ್ತದೆ. ಅವರ ಬಳಿ ದುಡ್ಡಿನ ವಿಚಾರ ಹೀಗೆ ಮಾತನಾಡಿ..

 • ಅವರಿಗೆಷ್ಟು ಸಂಬಳ?
  ಮೊದಲು ಅವರಿಗೆಷ್ಟು ಸಂಬಳ ಅನ್ನೋದನ್ನು ತಿಳಿದುಕೊಳ್ಳಿ. ನಂತರ ನಿಮ್ಮ ಸಂಬಳ ಅವರ ಸಂಬಳ ಸೇರಿಸಿ ಫೈನಾನ್ಶಿಯಲ್ ಪ್ಲಾನ್ಸ್ ಮಾಡಬಹುದು.
 • ಲೋನ್ ಎಷ್ಟಿದೆ?
  ನಿಮಗೆ ಯಾವ ಲೋನ್ ಇದೆ, ಅವರಿಗೆ ಎಷ್ಟು ಲೋನ್ ಇದೆ. ಇದೆಲ್ಲವನ್ನೂ ಮೊದಲು ಕೌಂಟ್ ಮಾಡಿ. ಆಗ ಎಷ್ಟು ಹಣ ಉಳಿಯುತ್ತದೆ ನೋಡಿ.
 • ಬಿಲ್ ಪಾವತಿಸಿ
  ಕರೆಂಟ್ ಬಿಲ್,ವಾಟರ್ ಬಿಲ್,ಬಾಡಿಗೆ, ನೆಟ್ ಎಲ್ಲಾದಕ್ಕೂ ಸೇರಿಸಿ ಎಷ್ಟು ಹಣ ಬೇಕಾಗುತ್ತದೆ ನೋಡಿ. ಇದನ್ನು ಮೈನಸ್ ಮಾಡಿ.
 • ಸೇವಿಂಗ್ಸ್ ಇರಲಿ
  ಪತಿಯ ಬಳಿ ಸೇವಿಂಗ್ಸ್ ಬಗ್ಗೆ ಮಾತನಾಡಿ, ಅವರು ಎಷ್ಟು ಸೇವ್ ಮಾಡಬಹುದು, ನೀವೆಷ್ಟು ಸೇವ್ ಮಾಡಬಹುದು ನೋಡಿ.
 • ಒಬ್ಬರ ಸಂಬಳ ಉಳಿಸಿ
  ಎಲ್ಲ ಲೋನ್, ಬಾಡಿಗೆ ಎಲ್ಲವನ್ನೂ ಸೇರಿಸಿ ಜೊತೆಗೆ ನಿಮ್ಮ ಹೊರಗಿನ ಖರ್ಚುಗಳನ್ನೆಲ್ಲಾ ಕಳೆದು ಒಬ್ಬರ ಸಂಬಳದಲ್ಲೇ ಮ್ಯಾನೇಜ್ ಮಾಡೋದಾದರೆ ಒಬ್ಬರ ಸಂಬಳ ತೆಗೆದಿಡಿ. ಇದೇ ನಿಮ್ಮ ಸೇವಿಂಗ್ಸ್ ಆಗುತ್ತದೆ.
 • ಹುಷಾರಾಗಿ ಮಾತನಾಡಿ
  ಮಾತುಗಳ ಮೇಲೆ ನಿಗಾ ಇರಲಿ. ಹುಡುಗರಿಗೆ ದುಡ್ಡಿನ ವಿಷಯದಲ್ಲಿ ಪುಟ್ಟ ಈಗೋ ಇರುತ್ತದೆ. ಮಾತನಾಡುವಾಗ ಸ್ವಲ್ಪ ಗಮನಿಸಿ ಅವರ ಈಗೋಗೆ ಹರ್ಟ್ ಆಗದಂತೆ ಮಾತನಾಡಿ.
 • ನಿಮ್ಮ ಖರ್ಚಿಗೂ ಇರಲಿ
  ನಿಮ್ಮ ಸ್ವಂತ ಖರ್ಚಿಗೆ ಶಾಪಿಂಗ್, ಪಾರ್ಲರ್‌ಗೂ ಹಣ ಇಟ್ಟುಕೊಳ್ಳಿ. ನಮ್ಮನ್ನು ನಾವು ಪ್ರೀತಿಸುವುದು ಮುಖ್ಯವೇ ಅದನ್ನು ಮರೆತು ಉಸಿರಾಡಲಾಗದ ಸ್ಥಿತಿ ತಂದುಕೊಳ್ಳಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss