Wednesday, August 17, 2022

Latest Posts

Good touch, Bad touch ಬಗ್ಗೆ ಮಗಳಿಗೆ ಹೇಳೋದು ಹೇಗೆ.. ಈ ಟಿಪ್ಸ್ ಜೊತೆಗಿರಲಿ..

ಮಗಳಿಗೆ ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಿಕೊಡುವುದು ತುಂಬಾನೇ ಮುಖ್ಯ.  ಇನ್ನೂ ಟೀನೇಜ್‌ಗೆ ಬಾರದ ಮಕ್ಕಳಿಗೂ ಲೈಂಗಿಕ ಕಿರುಕುಳ ನಡೆಯುತ್ತಿದೆ. ಈ ರೀತಿ ಸಮಯಲ್ಲಿ ಮಕ್ಕಳಿಗೆ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂದು ತಿಳಿಸಿಕೊಡುವುದು ದೊಡ್ಡವರ ಜವಾಬ್ದಾರಿ. ಕೆಲವೊಮ್ಮೆ ಈ ರೀತಿ ವಿಚಾರಗಳು ಮುಜುಗರ ಉಂಟುಮಾಡಬಹುದು. ಮಕ್ಕಳು ತಮ್ಮ ಪೋಷಕರ ಜೊತೆ ಇದನ್ನು ಶೇರ್ ಮಾಡಲು ಇಷ್ಟಪಡದೇ ಇರಬಹುದು. ಇನ್ನೂ ಹಲವು ಬಾರಿ ಕೆಟ್ಟ ಸ್ಪರ್ಶದ ಅನುಭವ ಅವರಿಗೆ ಇದ್ದರೂ ಅದು ಕೆಟ್ಟದ್ದು ಎಂದು ಅವರಿಗೆ ತಿಳಿಯೋದೆ ಇಲ್ಲ. ಈ ರೀತಿ ಮಗಳಿಗೆ ತಿಳಿ ಹೇಳಿ..

  • ಅವರ ದೇಹದ ಮೇಲೆ ಅವರಿಗೆ ಸಂಪೂರ್ಣ ಹಿಡಿತ ಸಾಧಿಸಲು ಬಿಟ್ಟುಬಿಡಿ.
  • ಸೂಕ್ಷ್ಮ ವಿಚಾರ ತಿಳಿಸುವಾಗ ಸೂಕ್ಷ್ಮ ಭಾಷೆ ಬಳಸಿ.
  • ನಿಮ್ಮ ಜೊತೆ ಕಂಫರ್ಟ್ ಫೀಲ್ ಮಾಡದಿದ್ದರೆ, ಆಕೆ ಯಾರ ಜೊತೆ ಮಾತನಾಡುತ್ತಾಳೋ ಅವರಿಗೆ ಇದನ್ನೆಲ್ಲಾ ಹೇಳಿ.
  • ಹೆವಿಯಾದ ಕಾನ್ವರ್‌ಸೇಶನ್ ಬೇಡ, ಈಸಿಯಾಗಿ ಮಾಮೂಲಿ ಮಾತಿನಂತೆ ಅದೂ ಇರಲಿ.
  • ಸ್ವಿಮ್ ಸೂಟ್ ಬಗ್ಗೆ ತಿಳಿಸಿ. ಸ್ವಿಮ್ ಸೂಟ್‌ನಲ್ಲಿ ದೇಹ ಹೇಗೆ ಕವರ್ ಆಗುತ್ತದೆಯೋ ಅದು ಅವರ ಖಾಸಗಿ ಅಂಗ, ಅದನ್ನು ಯಾರೂ ಮುಟ್ಟುವಂತಿಲ್ಲ ಎಂದು ಹೇಳಿ.
  • ಸೇಫ್ ಟಚ್ ಹೇಗಿರುತ್ತದೆ ಎಂದು ತಿಳಿಸಲು ಅವರಿಗೆ ಅರ್ಥವಾಗುವ ಉದಾಹರಣೆ ನೀಡಿ.
  • ನೋ ಎಂದು ಹೇಳುವುದನ್ನು ಕಲಿಸಿ, ಧೈರ್ಯವಾಗಿ ಮಾತನಾಡುವುದಕ್ಕೆ ಎನ್‌ಕರೇಜ್ ಮಾಡಿ.
  • ಏನೇ ಕೆಟ್ಟ ಘಟನೆ ನಡೆದರೂ ಮನೆಗೆ ಬಂದು ಹೇಳುವಂತೆ ರೂಢಿ ಮಾಡಿ.
  • ಪುಸ್ತಕಗಳಲ್ಲಿ ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶದ ಬಗ್ಗೆ ಇರುವುದನ್ನು ಓದಿ ಹೇಳಿ.
  • ಒಂದು ಬಾರಿ ಇವನ್ನೆಲ್ಲ ಹೇಳಿ ಸುಮ್ಮನಾಗಬೇಡಿ. ಆಗಾಗ ಹೇಳುತ್ತಾ ಅವರಿಗೆ ಮನದಟ್ಟು ಮಾಡಿಸಿ.
  • ಅವರ ದೇಹಕ್ಕೆ ಅವರೇ ಬಾಸ್ ಎನ್ನುವುದನ್ನು ಹೇಳಿಕೊಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!