Wednesday, August 10, 2022

Latest Posts

ಮೊಬೈಲ್ ನಲ್ಲಿನ Photos ಲ್ಯಾಪ್’ಟಾಪ್ ಗೆ Transfer ಮಾಡಿ: ಇಲ್ಲಿದೆ ಸಿಂಪಲ್ ಸ್ಟೆಪ್ಸ್

ಈಗಿನ ಕಾಲದಲ್ಲಿ ಕ್ಯಾಮೆರಾಗಳಂತೆ ಮೊಬೈಲ್ ನಲ್ಲೂ ಸಾವಿರಾರು ಫೋಟೋ, ವಿಡಿಯೋಗಳು ಇರುತ್ತದೆ. ಅದನ್ನ ಮೊಬೈಲ್ ನಲ್ಲಿ ಸ್ಟಾಕ್ ಇಡುವ ಬದಲು ನಿಮ್ಮ ಲ್ಯಾಪ್ ಟಾಪ್ ಗಳಲ್ಲೇ ಇಡಬಹುದು… ಹೇಗೆ ಅಂತ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್

ಆಂಡ್ರಾಯ್ಡ್  ಮೊಬೈಲ್ ನಿಂದ ಲ್ಯಾಪ್ ಟಾಪ್ ಗೆ:

  • ಮೊದಲಿಗೆ ನಿಮ್ಮ ಯುಎಸ್ ಬಿ ಕೇಬಲ್ ನಿಂದ ಮೊಬೈಲ್ ಅನ್ನು ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿಕೊಳ್ಳಿ.
  • ನಂತರ ನಿಮ್ಮ ಲ್ಯಾಪ್ ಟಾಪ್ ನಲ್ಲಿ ಮೊಬೈಲ್ ಡಿವೈಸ್ ನಿಂದ ಚಾರ್ಚ್ ಆಗಬೇಕೇ ಅಥವಾ ಡೇಟಾ ಟ್ರಾನ್ಸ್ ಫರ್ ಆಗಬೇಕಾ ಅಂತ ಕೇಳುತ್ತದೆ.
  • ಅಲ್ಲಿ ಟ್ರಾನ್ಸ್ ಫರ್ ಫೈಲ್ಸ್ ಆಯ್ಕೆ ಮಾಡಿಕೊಳ್ಳಿ.
  • ನಂತರ ಮೈ ಕಂಪ್ಯೂಟರ್ ಗೆ ಹೋಗಿ ನಿಮ್ಮ ಮೊಬೈಲ್ ಕನೆಕ್ಟ್ ಆಗಿರುವುದನ್ನು ಓಪನ್ ಮಾಡಿಕೊಳ್ಳಿ.
  • ಡ್ರೈವ್ ಸಿ ಹೊರತು ಪಡಿಸಿ ಬೇರೆ ಯಾವುದಾದರೂ ಡ್ರೈವ್ ನಲ್ಲಿ ಹೊಸ ಫೋಲ್ಡರ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿರುವ ಡೇಟಾಗಳನ್ನು ಅದಕ್ಕೆ ಟ್ರಾನ್ಸ್ ಫರ್ ಮಾಡಬಹುದು.

ಐಫೋನ್ ನಿಂದ ಲ್ಯಾಪ್ ಟಾಪ್ ಗೆ:

  • ನಿಮ್ಮ ಲ್ಯಾಪ್ ಟಾಪ್ ನಲ್ಲಿ ಲೇಟೆಸ್ಟ್ ಐ ಟ್ಯೂನ್ಸ್ ನ ಇನ್ಸ್ ಟಾಲ್ ಮಾಡಿಕೊಳ್ಳಿ.
  • ಐಫೋನ್ ನನ್ನು ಯುಎಸ್ ಬಿ ಕೇಬಲ್ ಕನೆಟರ್ ಮೂಲಕ ಕನೆಕ್ಟ್ ಮಾಡಿಕೊಳ್ಳಿ.
  • ನಂತರ ಸ್ಟಾರ್ ಬಟನ್ ಕ್ಲಿಕ್ ಮಾಡಿ ಅಲ್ಲಿನ ಫೋಟೋಸ್ ಆಯ್ಕೆ ಮಾಡಿಕೊಳ್ಳಬೇಕು.
  • ನಂತರ ಫೋಟೋಸ್ ನ ಬಲ ಭಾಗದಲ್ಲಿ ಇಂಪೋರ್ಟ್ ಆಯ್ಕೆ ಮಾಡಿಕೊಂಡರೆ ಲ್ಯಾಪ್ ಟಾಪ್ ಗೆ ಕನೆಕ್ಟ್ ಆಗಿರುವ ಮೊಬೈಲ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.
  • ನಂತರ ನೀವು ಟ್ರಾನ್ಸ್ ಫರ್ ಮಾಡಬೇಕಿರುವ ಫೋಟೋಸ್ ಆಯ್ಕೆ ಮಾಡಿ, ಇಂಪೋರ್ಟ್ ಮಾಡಿದರೆ ಸಾಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss