ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒತ್ತಡದ ಸನ್ನಿವೇಶ ನಿಭಾಯಿಸೋಕೆ ಆಗುತ್ತಿಲ್ವಾ? Panic attack ಆದವರು ಎದುರಿಗಿದ್ದರೆ ಈ ರೀತಿ ಮಾಡಿ..

ಹಲವರಿಗೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿ ಇಲ್ಲ. ಇದಕ್ಕೆ ಪ್ರಿಪರೇಶನ್ ಇಲ್ಲದಿರುವುದೂ ಒಂದು ಕಾರಣ. ನಮಗೆ ತಿಳಿದಿಲ್ಲದ ಕೆಲಸ ಮಾಡಲು ಕೊಟ್ಟಾಗ ಹೆದರಿಕೆ ಆಗುತ್ತದೆ. ಇನ್ನು ಜೀವನದಲ್ಲಿಯೂ ಇಂಥ ಪರಿಸ್ಥಿತಿ ಬಂದಾಗ ಪ್ಯಾನಿಕ್ ಆಗುತ್ತೇವೆ. ಪ್ಯಾನಿಕ್ ಅಟ್ಯಾಕ್ ಪ್ರಾಣಕ್ಕೇ ಕುತ್ತು ತರಬಹುದು. ನಿಮ್ಮ ಸುತ್ತಮುತ್ತಲು ಯಾರಾದರೂ ಪ್ಯಾನಿಕ್ ಅಟ್ಯಾಕ್‌ಗೆ ತುತ್ತಾಗುತ್ತಿದ್ದರೆ ಈ ರೀತಿ ಮಾಡಿ..

  • ಮೊದಲಿಗೆ ಅವರನ್ನು ಶಾಂತವಾಗಿರುವಂತೆ ನೋಡಿಕೊಳ್ಳಿ. ಏನೂ ಆಗಿಲ್ಲ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿ. ಸಮಾಧಾನ ಪಡಿಸಿ.
  • ಅವರೇನಾದರೂ ಈ ವೇಳೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಮೊದಲು ಮಾತ್ರೆಗಳನ್ನು ತೆಗೆದುಕೊಡಿ.
  • ಅವರಿಗೆ ಗಾಳಿ ಬೇಕು, ನೀರು ಬೇಕು, ಮನೆಯವರ ಜೊತೆ ಮಾತನಾಡಬೇಕಂತೆ ಹೀಗೆ ನಿಮ್ಮದೇ ಊಹೆ ಬೇಡ.
  • ಉದ್ದುದ್ದ ವಾಕ್ಯಗಳನ್ನು ಹೇಳಬೇಡಿ. ಅವರಿಗೆ ಈಗ ಎಲ್ಲವೂ ಜಟಿಲವಾಗಿಯೇ ಕಾಣುತ್ತದೆ. ವಾಕ್ಯಗಳನ್ನು ತುಂಡುಮಾಡಿ ಚಿಕ್ಕದಾಗಿ ಹೇಳಿ.
  • ಮೊದಲು ಆರಾಮಾಗಿ ಉಸಿರಾಡಲು ತಿಳಿಸಿ. ನೀವು ಅವರ ಜೊತೆ ಮೆಲ್ಲಗೆ ಉಸಿರಾಡಿ ಅಥವಾ ಸ್ಲೋ ಆಗಿ ಕೌಂಟ್ ಮಾಡಿ ಉಸಿರಾಡಲು ಹೇಳಿ.
  • ನಾನು ಇಲ್ಲಿಯೇ ಇದ್ದೇನೆ. ನಿಮಗೇನು ಬೇಕು ಎಂದು ಕೇಳಿ.
  • ನೀವು ಮಾತನಾಡುವ ಬದಲು ಅವರನ್ನು ಮಾತನಾಡಲು ಬಿಡಿ. ಅವರಿಗೇನು ಬೇಕು ಅವರು ಹೇಳಲು ಬಿಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss