ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಡೆಬಿಟ್ ಕಾರ್ಡ್ ನ Password ನೆನಪಿನಲ್ಲಿಲ್ಲವೇ? ನೀವೇ Update ಮಾಡಿಕೊಳ್ಳೋದಕ್ಕೆ ಇಲ್ಲಿದೆ ಸಿಂಪಲ್ ಸ್ಟೆಪ್ಸ್

ಡೆಬಿಟ್ ಕಾರ್ಡ್ ಗಳು ನಿಮ್ಮ ಉಳಿತಾಯ ಖಾತೆಯಲ್ಲಿರುವ ಹಣ ಪಡೆಯಲು ಉತ್ತಮ ಆಯ್ಕೆ. ಬ್ಯಾಂಕ್ ನಲ್ಲಿ ಹಣಕ್ಕಾಗಿ ಕ್ಯೂ ನಿಂತು, ಚೆಕ್ ಬರೆದು ಹಣ ಪಡೆಯುವ ಬದಲಿಗೆ ಈ ಸಿಂಪಲ್ ಕಾರ್ಡ್ ವ್ಯವಹಾರ ಬಂದಿದೆ. ಇದರಲ್ಲಿ ದಿನಕ್ಕೊಂದು ಆವಿಶ್ಕಾರದಂತೆ ಅಪ್ಡೇಟ್ ಆಗುತ್ತಲೇ ಇರುತ್ತದೆ. ಹೀಗಿರುವಾಗ ನಾವು ಅವುಗಳ ಬಗ್ಗೆ ತಿಳಿಯಬೇಕು ಅಲ್ವಾ..

ಮುಂಚೆ ಎಲ್ಲಾ ಡೆಬಿಟ್ ಕಾರ್ಡ್ ಗಳ ಪಾಸ್ ವರ್ಡ್ ಗಳು ಒಂದು ಕಾಗದದ ಒಳಗೆ ಸಣ್ಣ ಅಕ್ಷರದಲ್ಲಿ ಬರುತ್ತಿತ್ತು. ಆದರೆ ಈಗ ಇವೆಲ್ಲಾ ನಮ್ಮ ಕೈ ನಲ್ಲೇ ಇದೆ. ಕೇವಲ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಕಾರ್ಡ್ ಬಳಸಿ ನೀವು ನಿಮ್ಮದೇ ಒಂದು ಹೊಸ ಪಿನ್ ರಚಿಸಬಹುದು.. ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್

  • ಮೊದಲಿಗೆ ನಿಮ್ಮ ಡೆಬಿಟ್ ಕಾರ್ಡ್, ಅಕೌಂಟ್ ನಂಬರ್, ನಿಮ್ಮ ಮೊಬೈಲ್ ಪಡೆದು ಎಟಿಎಂ ಗೆ ತೆರಳಿ.
  • ಅಲ್ಲಿ ನಿಮ್ಮ ಕಾರ್ಡ್ ಯಂತ್ರದ ಒಳಗೆ ಹಾಕಿದರೆ ನಿಮಗೆ ಅನೇಕ ಆಯ್ಕೆಗಳ ಜೊತೆಗೆ ಜೆನರೇಟ್ ಪಿನ್ ಅಥವಾ Forgot password ಆಯ್ಕೆಗಳು ಬರುತ್ತದೆ.
  • ನಿಮ್ಮ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ನೋದಂಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ. (ನೀವೇನಾದರೂ ಹೊಸ ಕಾರ್ಡ್ ಗೆ ಪಾಸ್ ವರ್ಡ್ ಹಾಕಬೇಕೆಂದರೆ ಮೊದಲಿಗೆ ನಿಮ್ಮ ಅಕೌಂಟ್ ನಂಬರ್ ಕೇಳುತ್ತದೆ. ನಂತರ ಮೊಬೈಲ್ ಸಂಖ್ಯೆ ಕೇಳುತ್ತದೆ.)
  • ಆಗ ನಿಮ್ಮ ಮೊಬೈಲ್ ಗೆ OTP ಸಂಖ್ಯೆ ಬರುತ್ತದೆ. ಇದನ್ನು ಎಟಿಎಂ ನಲ್ಲಿ ಟೈಪ್ ಮಾಡಿದರೆ ನ್ಯೂ ಪಾಸ್ ವರ್ಡ್ ರಚಿಸುವ ಆಯ್ಕೆ ಬರಲಿದೆ.
  • ಅಲ್ಲಿ ನೀವು ಯಾವುದಾದರೂ ನೆನಪಿನಲ್ಲಿ ಇಡಲು ಸಾಧ್ಯವಾಗುವಂತಹ ನಾಲ್ಕು ನಂಬರ್ ಗಳನ್ನು ಹಾಕಿ ಓಕೆ ಒತ್ತಿದರೆ ಆಯ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss