Saturday, August 13, 2022

Latest Posts

ಇಷ್ಟೇನಾ ಜಾಗರೂಕತೆ? ಹೈದರಾಬಾದಿನ ಚಾರ್ಮಿನಾರ್ ಜನಸಂದಣಿ ಹುಟ್ಟಿಸಿದ ಪ್ರಶ್ನೆ…

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈದ್ ಮುನ್ನಾದಿನ ಹೈದರಾಬಾದಿನ ಚಾರ್ಮಿನಾರಿನ ಪ್ರದೇಶದಲ್ಲಿ ಸಡಗರದ ಖರೀದಿಗಳಲ್ಲಿ ತೊಡಗಿರುವ ಜನಸಂದಣಿಯ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ತೆಲಂಗಾಣದಲ್ಲಿ ಕೋವಿಡ್ ಹಬ್ಬುವಿಕೆಯ ತಡೆಗೆ 10 ದಿನಗಳ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಇಂಥ ಗಿಜಿಗುಡುವ ಗುಂಪಿನ ದೃಶ್ಯವನ್ನು ಎ ಎನ್ ಐ ಸುದ್ದಿಸಂಸ್ಥೆ ಪ್ರಸಾರ ಮಾಡಿದೆ.
ಸೋಂಕು ಹೆಚ್ಚಾದಾಗ ಪ್ರಧಾನಿ ಮತ್ತು ಸರ್ಕಾರಗಳನ್ನು ದೂಷಿಸಿದರಾಯಿತೇ? ಸ್ಥಳೀಯಾಡಳಿತಕ್ಕಾಗಲೀ, ಜನರಿಗಾಗಲೀ ವಾಸ್ತವದ ಅರಿವು ಮತ್ತು ನಾಗರಿಕ ಪ್ರಜ್ಞೆ ಏನೂ ಇಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರಶ್ನಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss