spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿಡಬ್ಲ್ಯೂಡಿ ಶಾಂತಗೌಡ ಮನೆ ಪೈಪ್‌ನಲ್ಲಿ ಹಣದ ಕಂತೆ ಪತ್ತೆ ಹಚ್ಚಿದ್ದು ಹೇಗೆ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಒಂದೇ ದಿನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 65 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಅಕ್ರಮ ಹಣ ಪತ್ತೆ ಹಚ್ಚಿದ್ದರು.
ಇದೇ ವೇಳೆ ಕಲಬುರ್ಗಿಯ ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ಪೈಪ್‌ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿತ್ತು. ಈ ರೀತಿ ಪೈಪ್‌ನಲ್ಲಿ ಸಿಕ್ಕ ಹಣದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಧಿಕಾರಿಗಳಿಗೆ ಈ ಬಗ್ಗೆ ತಿಳಿದಿದ್ದು ಹೇಗೆ ಅನ್ನೋದರ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ಈ ಅಂಶಗಳಿಂದ ಪೈಪ್‌ನಲ್ಲಿ ಹಣವಿದೆ ಅನ್ನೋ ವಿಷಯ ಅಧಿಕಾರಿಗಳಿಗೆ ತಿಳಿದಿದೆ..
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಶಾಂತಗೌಡ ಅವರು ಪದೇ ಪದೆ ಟಾಯ್ಲೆಟ್ ಹೋಗಿ ಬರೋದಾಗಿ ಹೇಳಿ ಬಾತ್‌ರೂಂ ಕಡೆ ತೆರಳಿದ್ದಾರೆ. ಇದೇ ವೇಳೆ ಅವರ ಪತ್ನಿ ಹಾಗೂ ಮಗ ಕೂಡ ಹೆಚ್ಚಾಗಿ ಈ ಪೈಪ್ ಇದ್ದ ಭಾಗದಲ್ಲೇ ನಿಂತಿದ್ದರು. ಹಣಕ್ಕೆ ಕಾವಲು ಕಾಯುವ ರೀತಿ. ಇದೆಲ್ಲವೂ ಅಧಿಕಾರಿಗಳಿಗೆ ಅನುಮಾನಾಸ್ಪದವಾಗಿ ಕಾಣಿಸಿದ್ದು, ಬಾತ್‌ರೂಂ ಒಳಗೆ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.
ವಾಷಿಂಗ್ ಮಶೀನ್ ವೇಸ್ಟ್ ನೀರು ಹೊರ ಹೋಗಲು ಇದ್ದ ಪೈಪ್ ಮೇಲೆ ಕಲ್ಲು ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೇಳಿದ್ದಕ್ಕೆ ವಾಷಿಂಗ್ ಮಶೀನ್ ಕೆಟ್ಟಿದೆ, ಮೂರು ತಿಂಗಳಿಂದ ಬಳಸಿಲ್ಲ ಎಂದು ಹೇಳಲಾಗಿದೆ.
ಕಲ್ಲನ್ನು ಪಕ್ಕಕ್ಕೆ ಸರಿಸಿ ನೋಡಿದಾಗ, ಅದರ ಅಡಿಯ ಪೈಪ್‌ನಲ್ಲಿ ಕಂತೆ ಕಂತೆ ಹಣ ತುರುಕಿರುವುದು ಕಣ್ಣಿಗೆ ಬಿದ್ದಿದೆ. ತದನಂತರ ಪ್ಲಂಬರ್ ಕರೆಸಿ ಇನ್ನೆಲ್ಲಾ ನೋಟನ್ನು ಹೊರತೆಗೆಯಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss