1,000 ವರ್ಷಗಳ ಬಳಿಕ ಡೆತ್‌ವ್ಯಾಲಿಯಲ್ಲಿ ಮಳೆ: ಪ್ರವಾಹದಲ್ಲಿ ಸಿಲುಕಿದ ಸಾವಿರ ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅದೊಂದು ಸಾವಿನ ಕಣಿವೆ(Death Valley) ಹೆಸರೇ ಸೂಚಿಸುವಂತೆ, ಅಲ್ಲಿಗೆ ಹೋದವರು ಜೀವಂತವಾಗಿ ಹಿಂತಿರುಗುವುದು ತುಂಬಾ ಕಷ್ಟ. ಏಕೆಂದರೆ ಕುಡಿಯಲು ಒಂದು ಗುಟುಕು ನೀರಷ್ಟೇ ಅಲ್ಲ, ಒಂದೇ ಒಂದು ಹುಲ್ಲು ಕಡ್ಡಿ ಕೂಡಾ ಬೆಳೆಯಲ್ಲ. ಎಲ್ಲಿ ನೋಡಿದರೂ ಬೆಟ್ಟ, ಗುಡ್ಡಗಳೇ ಕಾಣುತ್ತವೆ. ಇಂತಹ ಸಾವಿನ ಕಣಿವೆಯಲ್ಲಿ ಈ ವರ್ಷ ಭಾರಿ ಮಳೆ ಸುರಿದಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿ ಸಾವಿರ ವರ್ಷಗಳ ಬಳಿಕ ಈ ರೀತಿಯ ಮಳೆ ಬಂದು ದಾಖಲೆ ಬರೆದಿದೆ.

ಈ ಪ್ರದೇಶದಲ್ಲಿ ವಿಶ್ವದ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಅದಕ್ಕಾಗಿಯೇ ಇದನ್ನು ಡೆತ್ ವ್ಯಾಲಿ ಎಂದು ಕರೆಯಲಾಗುತ್ತದೆ. ಅಂತಹ ಅಪಾಯಕಾರಿ ಸ್ಥಳದಲ್ಲಿ ಭಾರೀ ವರ್ಷಧಾರೆಯಿಂದ ಪ್ರವಾಹ ಉಂಟಾಗಿದೆ. ಏತನ್ಮಧ್ಯೆ, ಅಮೇರಿಕನ್ ಸರ್ಕಾರವು ಪ್ರವಾಸಿಗರಿಗೆ ಈ ಡೆತ್ ವ್ಯಾಲಿ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. ಹಾಗಾಗಿ ಪ್ರವಾಸಕ್ಕೆ ಬಂದಿದ್ದ 500ಕ್ಕೂ ಹೆಚ್ಚು ಪ್ರವಾಸಿಗರು ಹಾಗೂ 500ಕ್ಕೂ ಹೆಚ್ಚು ಸಿಬ್ಬಂದಿ ಪ್ರವಾಹದಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಸುಮಾರು 30 ವಾಹನಗಳು ಕೆಸರಿನಲ್ಲಿ ತಗಲಾಕ್ಕೊಂಡು ಆರು ಗಂಟೆಗಳ ನಂತರ ಅವರೆಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಕಳೆದ ಎರಡು ವಾರಗಳಲ್ಲಿ ನಾಲ್ಕು ಬಾರಿ ಪ್ರವಾಹ ಸೃಷ್ಟಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!