ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದ ಮಾಸ್ಟರ್‌ ಮೈಂಡ್‌ ಬಂಧನ, ಮುಂಬೈಗೆ ಪಲಾಯನಗೊಂಡಿದ್ದ ಆರೋಪಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಹಳೆ ಹುಬ್ಬಳ್ಳಿ ಗಲಭೆಗೆ ಕುಮ್ಮಕ್ಕು ನೀಡದ್ದ ಎನ್ನಲಾದ ಮಾಸ್ಟರ್ ಮೈಂಡ್ ವಸೀಂ ಪಠಾಣ ಪೊಲೀಸರು ಬಂಧಿಸಿ ಗುರುವಾರ ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಗಲಭೆ ವೇಳೆ ಪೊಲೀಸ್ ಕಾರು ಹತ್ತಿ ಪ್ರಚೋದನಾ ಕಾರಿ ಭಾಷಣ ಮಾಡಿ ಪ್ರತಿಭಟನೆ ಕುಮ್ಮಕ್ಕು ನೀಡಿದ ಮುಖ್ಯ ಆರೋಪಿ ಎನ್ನಲಾಗಿತ್ತು.

ಗಲೆಭೆ ನಡೆದಾಗಿನಿಂದಲೂ ಪೊಲೀಸರು ಇವನನ್ನು ಹಿಡಿಯಲು ಜಾಲ ಬೀಸಿದ್ದರು. ವಸೀಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಲೆ ಕುಟುಂಬದ ಸಮೇತ ಹೈದರಾಬಾದ್‌ಗೆ ಪಲಾಯಣ ಮಾಡಿದ್ದಾನೆ ಎಂದು ತಿಳಿದು ಬಂದಿತ್ತು.‌ ತನಿಖಾಧಿಕಾರಿ ಅಲ್ತಾಪ್ ಮುಲ್ಲಾ ತಂಡ ಹೈದರಾಬಾದ ಸೇರಿದಂತೆ ಅನೇಕ ನಗರದಲ್ಲಿ ಶೋಧ ಮಾಡಿದ್ದರು.

ಆದರೆ ಮುಂಬೈನಲ್ಲಿರುವುದನ್ನು ಖಚಿತ ಮಾಹಿತ ಮೇರೆಗೆ ಬುಧವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದ್ದರು. ನಂತರ ಅಲ್ಲಿಂದ ವಿಮಾನದ ಮೂಲಕ ಬೆಳಗಾವಿಗೆ ಬಂದು ಅಲ್ಲಿಂದ ಪೊಲೀಸ್ ವಾಹನದಲ್ಲಿ ಹುಬ್ಬಳ್ಳಿ ಕರೆತರಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!